ಅದೇಕೋ ಏನೋ ಇತ್ತೀಚಿಗೆ ಮತ್ತೊಮ್ಮೆ ಓದುವ ಹಂಬಲ ಹೆಚ್ಚಾಯಿತು. ಆದರೆ ಈಬಾರಿ ನಾನು ಓದುವ ಮಾರ್ಗವನ್ನು ಅರಿತಿದ್ದೆ. ಇದನ್ನು ಕತೆ/ಕಾದಂಬರಿ ರೀತಿ ಓದಿದರೆ ಖಂಡಿತ ಅರ್ಥವಾಗದು ಎಂಬುದು ಅರಿತೆ. ಇದೊಂದು ವಿಮರ್ಶಾ ಗ್ರಂಥ.
ಈ ಗ್ರಂಥದ ಒಂದೊಂದು ಭಾಗವು ಅಮೂಲ್ಯವಾದುದು. ಮೂಕಜ್ಜಿಗೆ ಕನಸು ಬೀಳುತ್ತೆ, ಅದರಲ್ಲಿ ಯಾರ್ಯಾರೋ ಕಾಣಿಸ್ತಾರೆ, ಹೀಗೆಲ್ಲ ಯೋಚನೆ ಮಾಡಿದರೆ ಬಹುಷಃ ಕತೆಯೇ ಮುಂದುವರೆಯುವುದಿಲ್ಲ.
ನಮ್ಮ ಜೀವನದ ಅನೇಕ ಪ್ರಶ್ನೆಗಳಿಗೆ ಉತ್ತರ ಹುಡುಕಲು ಹೊರಟಿದ್ದಾರೆ ಲೇಖಕರು. ನಮ್ಮ ಪದ್ಧತಿಗಳು, ಆಚಾರ, ವಿಚಾರ, ಜೀವನ ಶೈಲಿ, ಮೂಡ ನಂಬಿಕೆಗಳು.. ಇದನ್ನೆಲ್ಲಾ ಯೋಚಿಸುತ್ತಿದ್ದರೆ ಜೀವನದಲ್ಲಿ ಜಿಜ್ಞಾಸೆ ಮೂಡುವುದು ಖಚಿತ. ಜೀವನದ ಅರ್ಥವನ್ನು ಹುಡುಕಲು ಹೊರಟಿದ್ದಾರೆ. ಲೇಖಕರ ಪ್ರಶ್ನೆಗಳು ಹಲವು ಭಾರಿ ನಮ್ಮನ್ನು ಕಾಡಿದ್ದುಂಟು. ಉತ್ತರ ಸಿಗದೇ, ಚರ್ಚಿಸದೆ ಸುಮ್ಮನಿದ್ದೇವೆ ಅಷ್ಟೆ.
ರಣರಂಗದಲ್ಲಿ ಶ್ರೀಕೃಷ್ಣನು ಮೂರು ದಿನಗಳವರೆಗೆ ಉಪದೇಶ ಮಾಡುತ್ತಿದ್ದರೂ ಕೌರವರು ಏನು ಮಾಡುತ್ತಿದ್ದರು?
ರಾವಣನನ್ನು ಹುಟ್ಟಿಸಿ, ರಾಮನು ಭೂಮಿಯಲ್ಲಿ ಜನಿಸುತ್ತಾನೆ. ರಾಮನೇ ಶಿವ ಧನಸ್ಸನ್ನು ಮುರಿಯಬೇಕು. ಯಾಕೆಂದರೆ ಲಕ್ಷ್ಮಿ ಅಂದರೆ ಸೀತೆಯನ್ನು ಬೇರೆ ಯಾರು ವರಿಸೋಕೆ ಆಗೋಲ್ಲ ಅಲ್ಲವೇ ? ಸೀತಾ ಪರಿಣಯದ ಅವಶ್ಯ ಕಥೆ ಇತ್ತ?
ದುಷ್ಟರನ್ನು ಹುಟ್ಟಿಸುವುದೇಕೆ ಹಾಗು ಕೊಲ್ಲುವುದೇಕೆ ? ಪ್ರಪಂಚದಲ್ಲಿ ಎಲ್ಲರು ಒಳ್ಳೆಯವರು ಯಾಕಾಗಬಾರದು?
ದಾಸರು ಹೆಂಡತಿಯನ್ನು ಬಿಟ್ಟು ದೇವರ ಸ್ಮರಣೆಯಲ್ಲಿ ಕಾಲ ಹಾಕಿದರೆ ಯಾವ ಕರ್ಮಕ್ಕಾಗಿ ಮದುವೆಯಾಗಬೇಕಿತ್ತು?
ಮನುಷ್ಯರೆಲ್ಲರೂ ನಿರ್ವಸ್ತ್ರದಾರಾಗಿದ್ದರೆ ನಾಚಿಕೆ /ದೈಹಿಕ ಆಕರ್ಷಣೆಯ ಅರ್ಥ ಬೇರೆ ಆಗುತ್ತಿತ್ತಲ್ಲವೇ? ಹೀಗೆ ಹತ್ತು ಹಲವು ಪ್ರಶ್ನೆಗಳು ಲೇಖಕರಿಗೆ ಉದ್ಬವಿಸುತ್ತದೆ.
ನಮ್ಮ ಪುರಾತನ ಯುಗದ ಅಸ್ತಿತ್ವ, ದಾಳಿಗೊಳಗಾದ ದೇವಸ್ತಾನಗಳು. ಒಂದು ಧರ್ಮದಿಂದ ಮತ್ತೊಂದು ಧರ್ಮದ ತುಳಿತ... ಕಣ್ಮರೆಯಾದ ಅನೇಕ ಸ್ಮಾರಕಗಳು... ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಇಡಿ ಕತೆಯು ಸುಬ್ಬಣ್ಣ ಮತ್ತು ಮೂಕಜ್ಜಿಯ ನಡುವಿನ ಸಂಭಾಷಣೆಯಲ್ಲಿ ಕಾಣುತ್ತೇವೆ. ಜೀವನದ ಸತ್ಯಾಸತ್ಯತೆ ಅರಿಯಲು ಲೇಖಕರು ಮೂಕಜ್ಜಿಯ ಸಹಾಯ ಪಡೆದಿದ್ದಾರೆ ಹಾಗು ತಮ್ಮ ಮಂಡನೆಯನ್ನು ಮೂಕಜ್ಜಿಯ ಮುಖಾಂತರ ಮಂಡಿಸಿದ್ದಾರೆ.
ಇದೊಂದು ಅದ್ಬುತ ಗ್ರಂಥ. ಎಲ್ಲರು ಕೊಂಡು ಓದಬೇಕಾದ ಒಂದು ಪುಸ್ತಕ.
ಚಿ.ಸ.ನ.
2 comments:
" ಮೂಕಜ್ಜಿ..." ಪುಸ್ತಕ ಕುರಿತು ತುಂಬಾ ಕೇಳಿದ್ದೆ. ಆದರೆ ನಿಮ್ಮ ಈ ವಿವೆರ್ಷೆ ನನ್ನ ಓದಲೇ ಬೇಕೆಂಬ ಹುಚ್ಚನ್ನ ಕೆರಳಿಸಿದೆ. ಇಗೋ, ಸಪ್ನಾ ಬುಕ್ ಹೌಸ್ ನ ಹಾದಿಯಲ್ಲಿ
ನಿಮ್ಮ
ಅವೀನ್
ನೀವು ಹೇಳಿದ್ದು ಸಮನಾಗಿದೆ. ಮೂಕಜ್ಜಿಯ ಕನಸುಗಳುನ್ನು ಒಂದು ಕಾದಂಬರಿಯೆಂದು ಓದದೇ, ಅದನ್ನು ಒಂದು ಮನುಕುಲದ ವಿಮರ್ಶೆ ಅಂತ ಓದಿದರೆ ಚೆನ್ನಾಗಿ ಅರ್ಥವಾಗುತ್ತದೆ. ಇಲ್ಲಿ ಕಥೆಯಿದೆ ಆದರೆ ಅದಕ್ಕಿಂತ ಹೆಚ್ಚಾಗಿ ಮಾನವನ ವಿಕಾಸವಾದವೂ ಇದೆ.
Post a Comment