Saturday, March 21, 2009

ಆ ನಾಲ್ಕು ಜನ...

ಆ ನಾಲ್ಕು ಜನ...
ಆ ನಾಲ್ಕು ಜನ ಪುಂಡು ಹುಡುಗರೇ... ಒಬ್ಬಬ್ಬರಿಗೆ ಒಂದೊಂದು ಅಡ್ಡ ಹೆಸರುಗಳು....ಎಲ್ಲರು ಪ್ರಾಯಕ್ಕೆ ಬಂದಿರೋರೆ..... ಮೊದಲನೆಯವನು ಕರಿಯ, ದಪ್ಪಗೆ, ಕಪ್ಪಗೆ, ಗುಂಡು ಗುಂಡಾಗಿ ಇದ್ದಾನೆ. ಎರಡನೆಯವನು ಕೆಂಚ... ಸ್ವಲ್ಪ ಕೆಂಪು ಕೆಂಪಾಗಿ ಇದ್ದಾನೆ. ಇನ್ನೊಬ್ಬ ಬಿಳಿಯ ಯಾವಾಗಲು ನಾಣಿ ಜೊತೇನೆ ಇರುತ್ತಾನೆ....
ನಮ್ಮ ಏರಿಯ ದಲ್ಲಿ ಎಲ್ಲರಿಗು ಈ ನಾಲ್ಕು ಜನ ಅಚ್ಚು ಮೆಚ್ಚು. ಎಲ್ಲರ ಮನೆ ಕಡೆಗೂ ಇವರು ಗಮನ ಹರಿಸ್ತಾರೆ. ಯಾವುದೇ ಬೇಧ, ಭಾವ ಇಲ್ಲದೆ ಎಲ್ಲರ ಮನೇಲೂ ಕೊಟ್ಟದ್ದು ತಿನ್ನುತ್ತಾರೆ. ಸ್ವಲ್ಪ ಪುಂಡರು ಕೂಡ. ರಸ್ತೇಲಿ ಜಗಳಕ್ಕೆ ನಿಂತರೆ ನಾವ್ಯಾರದ್ರು ಗದರಿಸಿ ಕಳಿಸಬೇಕು.
ನಮ್ಮ ಮನೆ ಎದುರಿಗಿನ ಪಾರ್ಕ್ ಇವರಿಗೆ ಒದ್ದು ರೀತಿ ಅಡ್ಡ. ಅಲ್ಲಿ ಬರೋ ಹೆಣ್ಣು ಮಕ್ಕಳನ್ನ ಚುಡಾಯಿಸೋದು ದಿನ ನಿತ್ಯದ ಕೆಲಸ. ಮೊನ್ನೆ ಪಕ್ಕದ ರೋಡಿನ ಹೆಂಗಸು ತನ್ನ ಮೂರು ಮಕ್ಕಳ ಜೊತೆ ನಮ್ಮ ಮನೆ ಹತ್ತಿರ ಬಂದಿದ್ದಾಗ ನಾನು ಆಕೆಯ ಮಗುವನ್ನು ಮುದ್ದು ಮಾಡುತ್ತಾ ಇದ್ದೆ... ಕರಿಯ ಅಲ್ಲೇ ದೂರದಲ್ಲಿ ನಿಂತು ಹೊಂಚು ಹಾಕುತ್ತ ಇದ್ದ. ನಾನು ನೋಡು ನೋಡುತ್ತಾನೆ ಅವಳ ಹಿಂದೆ ಹೋರಾಟ. ಒಂದು ರೀತಿ ಅವಳ ಸಹಕಾರಾನು ಇತ್ತು ಅನ್ನಿ.
ನಮ್ಮ ಕರಿಯನಿಗೆ ಸ್ಥಿತಿ ವಂತರ ಮನೆ ಹೆಣ್ಣು ಮಕ್ಕಳನ್ನು ಕಂಡರೆ ಒಂದು ರೀತಿ ಪ್ರೀತಿ ಜಾಸ್ತಿ. ಚೆನ್ನಾಗಿ ಸಾಕಿರುತ್ತಾರೆ, ಮುದ್ದು ಮುದ್ದಾಗಿ ಬೇರೆ ಇರುತ್ತಾರೆ, ಜೊತೆಗೆ ಬಾಡಿ ಗಾರ್ಡ್ ಗಳು ಬೇರೆ.... ನಮ್ಮ ಕರಿಯ ಬಾಡಿ ಗಾರ್ಡ್ ಗಳಿಗೆ ಕಣ್ಣಿಗೆ ಮಣ್ಣು ಎರಚಿ ಈ ಹೆಣ್ಣು ಮಕ್ಕಳ ಹಿಂದೆ ಓಡಾಡುತ್ತ ಇರುತ್ತಾನೆ. ಆ ಹುಡುಗೀರಿಗೂ ನಮ್ಮ ಕರಿಯಣ್ಣ ಕಂಡ್ರೆ ಆಸೇನೆ.... ಆದ್ರೆ ಮನೆಯವರು ಬಿಡಬೇಕಲ್ಲ... ಅವರ ಅವರ ಮನೆ ಸಂಪ್ರದಾಯ.....
ಕೆಂಚ ಸ್ವಲ್ಪ ಕರಿಯನಿಗೆ ಹೆದುರುತ್ತಾನೆ. ಅವನು ಇಲ್ಲದೆ ಇದ್ದಾಗ ನಮ್ಮ ಮನೆಗೆ ಬಂದು ಹೋಗುತ್ತಾನೆ. ಹುಡುಗೀರ ವಿಷಯದಲ್ಲಿ ಮಾತ್ರ ಮೂರು ಜನಾನು ಒಂದೇ.
ನಮ್ಮ ಏರಿಯ ಗೆ ಯಾರೇ ಹೊಸಬರು ಬಂದ್ರು ವಿಚಾರಿಸಿಕೊಳ್ಳುತ್ತಾರೆ. ಹೊರಗಿನವರ ಜೊತೆ ಜಗಳಕ್ಕೆ ನಿಂತರೆ ಒಮ್ಮೊಮ್ಮೆ ಕ್ರೋರಿಗಳು ಆಗಿರುತ್ತಾರೆ. ಕೆಲವೊಮ್ಮೆ ಇವರ ಜಗಳ ಪಕ್ಕದ ಬೀದಿ ಹುಡುಗರ ಜೋತೆನು ನಡೀತಾ ಇರುತ್ತೆ. ಎಷ್ಟೋ ಸಲ ನಾನೇ ಹೋಗಿ ಬಿಡಿಸಿದ್ದೀನಿ.
ಆದರು ಏನೋ ಇವರನ್ನೆಲ್ಲಾ ಕಂಡ್ರೆ ನಮಗೂ ಒಂದು ಥರ ಪ್ರೀತಿ. ಇವರಿಲ್ಲದೆ ನಮ್ಮ ದಿನ ಶುರು ಆಗೋದೇ ಇಲ್ಲ. ದಿನ ಮುಗಿಯೋದು ಇಲ್ಲ.
ಸಮಾಜದಲ್ಲಿ ನಮ್ಮೊಂದಿಗೆ ಹೊಂದಿಕೊಂಡು ಬಾಳುತ್ತಿರುವ ಈ ಡೊಂಕು ಬಾಲದ ನಾಯಕರುಗಳನ್ನು ಕೊಲ್ಲುವುದು ಬೇಡ ಅಲ್ಲವೇ. ಸಂತಾನ ಹರಣ ಚಿಕಿತ್ಸೆ ಸಾಕು ಅನ್ನಿಸುತ್ತೆ.
ಚಿ.ಸ.ನ.

Saturday, March 14, 2009

ರೋಸೆವಿಲೆನಲ್ಲಿ ಉಪಾಕರ್ಮ...

ರೋಸೆವಿಲೆನಲ್ಲಿ ಉಪಾಕರ್ಮ...
ಅಲಾರಂ ಗಡಿಯಾರ ಬೆಳಿಗ್ಗೆ ೫ ಗಂಟೆಗೆ ಹೊಡೆದು ಕೊಳ್ಳುತ್ತಾ ಇತ್ತು. ಎದ್ದು ತಲೆ ಮೇಲೆ ಮಟೊವರೆಗೂ ಸುಮ್ಮನೆ ಇರಲಿಲ್ಲ. ಕಡೆಗೂ ತಲೆ ಮೇಲೆ ಮಟ್ಟಿ ಮಲಗಿ ಕೊಂಡೆ. ಸ್ವಲ್ಪ ಹೊತ್ತಿಗೆ ಆಗಲೇ ಫೋನ್ ರಿಂಗ್ ಆಗೋಕೆ ಶುರು ಆಯಿತು. ಬೆಳಿಗ್ಗೆ ೫:೩೦ಕ್ಕೆ ಏಳಬೇಕು ಅನ್ನೋ ಒಂದೇ ಉದ್ದೇಶದಿಂದ ಹೋಟೆಲ್ ನವರಿಗೆ ಎಬ್ಬಿಸೋಕೆ ಹೇಳಿದ್ದೆ. ಅಂತು ಕಡೆಗೆ ಎದ್ದು ಕೂತೆ.
ಯಾಕೆ ಬೆಳಿಗ್ಗೆ ಬೇಗ ಎದ್ದೆ? ಮುಂದೇನು? ಇದಕ್ಕೆಲ್ಲ ಒಂದೇ ಉತ್ತರ, ಇವತ್ತು ಋಗ್ವೇದ ಉಪಾಕರ್ಮ. ನಮ್ಮ ತಂದೆಯವರು ಹೇಳಿದ್ರು ಭಾರತೀಯ ಕಾಲಮಾನದ ಪ್ರಕಾರ ಸಾಯಂಕಾಲದ ಒರೆಗೆ ಉಪಾಕರ್ಮ ಇರುತ್ತೆ. ನೀನು ಬೆಳಿಗ್ಗೆ ಬೇಗ ಎದ್ದು ಜನಿವಾರ ಬದಲಾಯಿಸು ಅಂತ.
ಅಂತು ಎದ್ದಿದ್ದಾಯಿತು, ಇನ್ನು ಶುಭ್ರವಾಗಬೇಕು. ಸಾಮಾನ್ಯವಾಗಿ ತಲೆಗೆ ನೀರು ಹಾಕಿಕೊಳ್ಳೋದು ವಾಡಿಕೆ. ಅಲ್ಲಿ ಎಲ್ಲಿಂದಆಗಬೇಕು... ಶಾಂಪೂ ನಲ್ಲಿ ಮಡಿ ಆಗಿ ಮಡಿ ಪಂಚೆ ಉಟ್ಟು ರೆಡಿ ಆದೆ.
ಅಮ್ಮ ಹೇಳಿದ್ದು ಜ್ಞಾಪಕಕ್ಕೆ ಬಂತು. ಸರಿಯಾಗಿ ನೋಡಿಕೋ.. ನಿನ್ನ ದೊಡ್ಡ ಪೆಟ್ಟಿಗೇಲಿ ಮರದ ಡಬ್ಬದಲ್ಲಿ ಜನಿವಾರ ಇಟ್ಟಿದ್ದೀನಿ ಅಂತ. ಮರದ ಡಬ್ಬ ತೆಗೆದೆ... ಮರದ ಡಬ್ಬದಲ್ಲಿ ಕಂಡಿದ್ದೇನು? ಯಶೋದೆ ಕೃಷ್ಣನ ಬಾಯಲ್ಲಿ ಪ್ರಪಂಚ ಕಂಡ ಹಾಗೆ ನನ್ನ ದಿನ ನಿತ್ಯದ ಅರ್ಧ ವಸ್ತು ಗಳು ಅದರಲ್ಲೇ ಇತ್ತು. ಬಾಚಣಿಗೆ, ಕೊಬ್ಬರಿ ಎಣ್ಣೆ, ನಿವಿಯ ಪೌಡರ್ ಇತ್ಯಾದಿ.... ಇಷ್ಟೆಲ್ಲಾ ಅದ್ರಲ್ಲಿ ಹೇಗೆ ಅಡಗಿತ್ತೋ ಗೊತ್ತಿಲ್ಲ. ಡಬ್ಬದ ಒಂದು ಮೂಲೇಲಿ ಜನಿವಾರ ಕೂತಿತ್ತು. ಜನಿವಾರದ ಪಕ್ಕದಲ್ಲಿ ಉಪಾಕರ್ಮ ಮಾಡಿಸೋ ಪುಸ್ತಕಾನು ರೆಡಿ ಇತ್ತು.
ನಾನು ಉಪಕರ್ಮಕ್ಕೆ ರೆಡಿ ಆದೆ. ಸಂದ್ಯಾವಂದನೆ ಮಾಡೋದು ಪೂರ್ವಕ್ಕೆ ಮುಖ ಮಾಡಿಕೊಂಡು ಅಂತ ಗೊತ್ತಿತ್ತು. ಭಾರತದಲ್ಲಿ ಎಲ್ಲರ ಮನೆ ಉಪಕರ್ಮನು ಮುಗಿಸಿಕೊಂಡು ಬರುತ್ತಿದ್ದ ಸೂರ್ಯನ್ನ ನೋಡಿದೆ. ನಾನಂತೂ ಅವನ್ನ ಪೂರ್ತಿಯಾಗಿ ನಂಬಿದ್ದೇನೆ. ಯಾಕೆಂದ್ರೆ ನಾನು ಪೂರ್ವಕ್ಕೆ ಮುಖ ಮಾಡಿ ಕೂರಲೇ ಬೇಕಾಗಿತ್ತು.
ಇಷ್ಟಕ್ಕೆ ತೊಂದರೆ ತಪ್ಪಲಿಲ್ಲ... ಅಮ್ಮ ಎಷ್ಟೇ ಹೇಳಿದ್ರು "ಪಂಚ ಪಾತ್ರೆ" ,"ಉದ್ದರಣೆ", ತಂದಿರಲಿಲ್ಲ. ಎರಡು ಗಾಜಿನ ಲೋಟ, ಎರಡು ಚಮಚ, ಒಂದು ಪಿಂಗಾಣಿ ಪಾತ್ರೆ ರೆಡಿ ಮಾಡಿದೆ. ನೆಲದ ಮೇಲೆ ಬೇರೆ ಕೂರೋ ಹಾಗಿಲ್ಲ.. ಕಾರ್ಪೆಟ್ ಹಾಕಿ ಬಿಟ್ಟಿದ್ದಾರೆ. ಏನು ಮಾಡಲಿ, ಚಾಪೆ ಬೇರೆ ತಂದಿಲ್ಲ... ಕಡೆಗೆ ಮನೆ ಇಂದ ತಂದಿದ್ದ ಒಂದು ಟವೆಲ್ ನ ಹಾಕಿ ಕೊಂದು ಪೂರ್ವಕ್ಕೆ ಮುಖ ಮಾಡಿ ಕೂತು ಕೊಂಡೆ.
ಸಂದ್ಯಾವಂದನೆ ಪುಸ್ತಕದಲ್ಲಿ ನಮ್ಮ ಪಿತೃಶ್ರಿ ಯವರು ನನಗೆ ಬೇಕಾಗಿರೂ ಹಾಳೆಗಳನ್ನ ಮದಿಸಿಟ್ಟಿದ್ದರು. ಎಲ್ಲ ರೆಡಿ ಆಯಿತು. ಮೂಗು ಹಿಡಿದು ಮಂತ್ರ ಹೇಳೋಕೆ ಶುರು ಮಾಡಿದೆ.
ಆ ಪುಸ್ತಕದಲ್ಲಿ ಕೆಲವು ಸಾಲುಗಳು ಹೀಗಿತ್ತು. .........................ಸಂವತ್ಸರೇ........... ಆಯಿನೆ........ ಋತು...........ಮಾಸೆ... ಇತ್ಯಾದಿ......
ಮತ್ತೆ ಕಷ್ಟಕ್ಕೆ ಸಿಕ್ಕಿ ಹಾಕಿ ಕೊಂಡಿದ್ದೆ. ಮನೆಗೆ ಕರೆ ಮಾಡ್ದೆ ಬೇರೆ ವಿಧಿನೆ ಇರಲಿಲ್ಲ. ನಿನ್ನೆ ಇನ್ನು $ ೧೦ ದೂರವಾಣಿ ಕಾರ್ಡ್ ತೊಗೊಂಡಿದ್ದೆ. ಎಷ್ಟೇ ಪ್ರಯತ್ನ ಪಟ್ಟರು ಕಾರ್ಡ್ ಬಳಸಿ ತುಮಕೂರಿಗೆ ಲೈನ್ ಸಿಗಲಿಲ್ಲ. ಹೋಟೆಲ್ ದೂರವಾಣಿ ಇಂದ ಮಾಡೋಣ ಅಂದು ಕೊಂಡರೆ ಅವರು ಕೊಡೊ ಬಿಲ್ ನ ೪೬ ರಿಂದ ಗುಣಿಸಿದರೆ ಭಯ ಆಗುತ್ತಿತ್ತು.
ಅಂತು ಭಾರತಿ ಜ್ಞಾಪಕಕ್ಕೆ ಬಂದ್ಲು. ಅವಳಿಗೆ ರಕ್ಷಾ ಬಂಧನಕ್ಕೆ ಬೇರೆ ಫೋನ್ ಮಾಡಬೇಕಿತ್ತು. ಅದು ಅಲ್ಲದೆ ಅವಳು ಬೆಂಗಳೂರಿನಲ್ಲಿ ಇರೋದ್ರಿಂದ ಲೈನ್ ಬೇಗ ಸಿಗುತ್ತಿತ್ತು.
ಭಾರತಿ ಮನೇಲಿ ಇರಲಿಲ್ಲ. ಅಮ್ಮನ ಮನೆಗೆ ಹೋಗಿದ್ಲು. ಅವರತ್ತೆ ಫೋನ್ ತೊಗೊಂಡ್ರು. ಯಾಕೋ ಅವರನ್ನ ಕೇಳೋಕೆ ಮನಸ್ಸಾಗಲಿಲ್ಲ. ಕುಶಲೋಪರಿ ವಿಚಾರಿಸಿ ಫೋನ್ ಇತ್ತೇ. ಅವರ ಅಮ್ಮನ ಮನೆಗೆ ಫೋನ್ ಮಾಡಿದೆ. ಅವರ ಮಾವ ಫೋನ್ ತೊಗೊಂಡ್ರು. ಕಷ್ಟ ತೋಡಿ ಕೊಂಡೆ. ನನಗೆ ಬೇಕಾದ ವಿಷಯ ತಿಳಿದು ಉಪಕರ್ಮಕ್ಕೆ ಕೂತೆ.
ಯಾರೋ ಒಬ್ಬ ಧಡೂತಿ ಹೆಂಗಸು ಕದ ತೆಗೆದು, ಧಡಾರನೆ ಒಳಕ್ಕೆ ನುಗ್ಗಿದಳು. ಬೇರೆ ದೇಶ, ಮೊದಲನೇ ದಿನ.. ಒಳ್ಳೆ ಕರ್ಮ ಅಂದು ಕೊಂಡೆ... ನೋಡು ನೋಡುತ್ತಾನೆ.. ನನ್ನ "ಪಂಚ ಪಾತ್ರೆ", "ಉದ್ದರಣೆ " ಎಲ್ಲ ತೆಗೆದು ಕೊಂದು ಹೋಗಿ ಪಾತ್ರೆ ತೊಳೆಯೋ ಮೆಶಿನ್ ಗೆ ಹಾಕಿ ಬಿಟ್ಲು. ನನ್ನ ಮಡಿ ಅಲ್ಲಿಗೆ ಆಯಿತು. ರೂಮ್ ಹೊರಗೆ " ದೋ ನಾಟ್ ಡಿಸ್ಟರ್ಬ್" ಬೋರ್ಡ್ ಹಾಕಬೇಕಿತ್ತು ಗೊತ್ತಿರಲಿಲ್ಲ.
ಅವಳು ಹೋದ ನಂತರ ಕೈ ಕಾಲು ತೊಳೆದು... "ಪಂಚ ಪಾತ್ರೆ", "ಒದ್ದರಣೆ" ರೆಡಿ ಮಾಡಿ ಕೊಂದು... ನನ್ನ ಉಪಾಕರ್ಮ ಮುಗಿಸಿದೆ....
೮ ಗಂಟೆಗೆ ಇನ್ನು ಹತ್ತು ನಿಮಿಷ ಇತ್ತು. ರೋಸೆವಿಲ್ಲೇ ಇಂದ ಸ್ಯಾನ್ ಫ್ರಾನ್ಸಿಸ್ಕೋ ಗೆ ಹೊರಡೋ ರೈಲು ೮ ಕ್ಕೆ ಇತ್ತು. ಕಷ್ಟ ಪಟ್ಟು ಟ್ಯಾಕ್ಸಿ ಹಿಡಿದು ರೈಲ್ವೆ ಸ್ಟೇಷನ್ ತಲುಪಿದೆ. ಮೊದಲೇ ಟಿಕೆಟ್ ಇದ್ದಿದ್ದರಿಂದ ಸುಲಭವಾಗಿ ರೈಲು ಸಿಕ್ಕಿತು....
ಸ್ಯಾನ್ ಫ್ರಾನ್ಸಿಸ್ಕೋ ಸ್ಟೇಷನ್ ನಲ್ಲಿ ನನ್ನ ಫ್ರೆಂಡ್ "ರೋವಿನ್" ಕಾಯ್ತಾ ಇದ್ದ.......
ಇದು ನಡೆದದ್ದು ಎರಡು ಸಾವಿರದ ಒಂದರಲ್ಲಿ... ನನ್ನ ಮೊದಲ ಅಮೇರಿಕ ಪ್ರವಾಸದಲ್ಲಿ.... ಪ್ರತಿ ಉಪಾಕರ್ಮಕ್ಕು ಇದು ಒಂದು ನೆನಪು...:)
ಚಿ.ಸ.ನ.

Saturday, March 7, 2009

ಕಾ: ಹೆಣ್ಣು ಕಾಣದ ಗಂಡು ಲೇ:ಬೀಚಿ

ನಾನು ಇತ್ತೀಚಿಗೆ ಕಾಲ ಕಳೆಯಲು ಓದಿದ ಕಾದಂಬರಿ "ಹೆಣ್ಣು ಕಾಣದ ಗಂಡು". ನನಗ್ಯಾಕೋ ಈ ಕಾದಂಬರಿ ಸರಿ ಕಾಣಲೇ ಇಲ್ಲ. ಬೀಚಿ ಅವರು ಇಡಿ ನಮ್ಮ ಸಮಾಜವೇ ಕಾಮ ಪಿಪಾಸು ಗಳಿಂದ ತುಮ್ಬಿರುವಂತೆ ಬಿಂಬಿಸಿದ್ದಾರೆ.

ಈ ಕಾದಂಬರಿ ಯಲ್ಲಿ ೩ ಮುಖ್ಯ ಪಾತ್ರಗಳು. ರಂಗಮ್ಮ - ವ್ಯಭಿಚಾರಿಣಿ. ಅನಂತ - ಸಂಗೀತ ಮೇಷ್ಟ್ರು - ಕಾಮ ಪಿಪಾಸು , ರತ್ನ - ಅಮಾಯಕೆ......

ರತ್ನನಿಗೆ ತನ್ನ ಮಾವನ ಜೊತೆ ಬಲವಂತದ ಮಾಡುವೆ. ಆತ ರೋಗಿಷ್ಟ... ಲಂಡ ಷಂಡ ಎಲ್ಲ ಹೌದು.... ರ

ನೀನಿಲ್ಲದೆ ನನಗೇನಿದೆ

ನೀನಿಲ್ಲದೆ ನನಗೇನಿದೆ
ಮನಸೆಲ್ಲ ನಿನ್ನಲ್ಲೆ ನೆಲೆಯಾಗಿದೆ
ಕನಸೆಲ್ಲ ಕಣ್ಣಲ್ಲೆ ಸೆರೆಯಾಗಿದೆ
ನೀನಿಲ್ಲದೆ ನನಗೇನಿದೆ

ನಿನಗಾಗಿ ಕಾದು ಕಾದು
ಪರಿತಪಿಸಿ ನೊಂದೆ ನಾನು
ಕಹಿಯಾದ ವಿರಹದ ನೋವು
ಹಗಲಿರುಳು ತಂದೆ ನೀನು ೨

ಎದೆಯಾಸೆ ಎನೋ ಎಂದು ನೀ ಕಾಣದಾದೆ
ನಿಶೆಯೊಂದೆ ನನ್ನಲ್ಲಿ ನೀ ತುಂಬಿದೆ
ಬೆಳಕೊಂದೆ ನಿನ್ನಿಂದ ನಾ ಬಯಸಿದೆ

ನೀನಿಲ್ಲದೆ ನನಗೇನಿದೆ
ಮನ್ಸೆಲ್ಲ ನಿನ್ನಲ್ಲೆ ನೆಲೆಯಾಗಿದೆ
ಕನಸೆಲ್ಲ ಕಣ್ಣಲ್ಲೆ ಸೆರೆಯಾಗಿದೆ
ನೀನಿಲ್ಲದೆ ನನಗೇನಿದೆ

ಒಲವೆಂಬ ಕಿರಣ ಬೀರಿ
ಒಳಗಿರುವ ಕಣ್ಣ ತೆರಿಸಿ
ಒಣಗಿರುವ ಎದೆನೆಲದಲ್ಲಿ
ಭರವಸೆಯ ಜೀವ ಹರಿಸಿ ೨

ಸೆರೆಯಿಂದ ಬಿಡಿಸಿ ನನ್ನ ಆತಂಕ ನೀಗೊ
ಹೊಸ ಜೀವೆ ನಿನ್ನಿಂದ ನಾ ಕಾಣುವೆ
ಹೊಸ ಲೋಕ ನಿನ್ನಿಂದ ನಾ ಕಾಣುವೆ

ನೀನಿಲ್ಲದೆ ನನಗೇನಿದೆ
ಮನ್ಸೆಲ್ಲ ನಿನ್ನಲ್ಲೆ ನೆಲೆಯಾಗಿದೆ
ಕನಸೆಲ್ಲ ಕಣ್ಣಲ್ಲೆ ಸೆರೆಯಾಗಿದೆ
ನೀನಿಲ್ಲದೆ ನನಗೇನಿದೆ

ಅಮ್ಮ, ನಿನ್ನ ಎದೆಯಾಳದಲ್ಲಿ...

ಅಮ್ಮ, ನಿನ್ನ ಎದೆಯಾಳದಲ್ಲಿ
ಗಾಳಕ್ಕೆ ಸಿಕ್ಕ ಮೀನು
ಮಿಡುಕಾಡುತಿರುವೆ ನಾನು

ಕಡಿಯಲೋಲ್ಲೆ ನೀ ಕರುಳಬಳ್ಳಿ
ಒಲವೂಡುತಿರುವ ತಾಯೆ,
ಬಿಡದ ಬುವಿಯ ಮಾಯೆ

ನಿನ್ನ ರಕ್ಷೆಗೂಡಲ್ಲಿ ಬೆಚ್ಚಗೆ
ಆಡಗಲಿ ಎಷ್ಟು ದಿನ ?
ದೂಡು ಹೊರಗೆ ನನ್ನ
ಓಟ ಕಲಿವೆ, ಒಳನೋಟ ಕಲಿವೆ, ನಾ
ಕಲಿವೆ ಊರ್ಧ್ವ ಗಮನ,
ಓ ಆಗಾಧ ಗಗನ

ಮೇಲೆ ಹಾರಿ, ನಿನ್ನ ಸೆಳೆತ ಮೀರಿ,
ನಿರ್ಭಾರಸ್ಥಿತಿಗೆ ತಲುಪಿ
ಬ್ರಹ್ಮಾಂಡವನ್ನೇ ಬೆದಕಿ
ಇಂಧನ ತೀರಲು, ಬಂದೇ ಬರುವೆನು
ಮತ್ತೆ ನಿನ್ನ ತೊಡೆಗೆ,
ಮೂರ್ತ ಪ್ರೇಮದೆಡೆಗೆ

-ಬಿ ಆರ್ ಲಕ್ಷ್ಮಣರಾವ್.

ಅಳುವ ಕಡಲೊಳು ತೇಲಿ ಬರುತಲಿದೆ...

ಅಳುವ ಕಡಲೊಳು ತೇಲಿ ಬರುತಲಿದೆ ನಗೆಯ ಹಾಯಿ ದೋಣಿ
ಬಿದ್ದ ಮನ ಮನದ ಕೊರಡೊಳು ಹೂವು ಹೂವು ಅರಳಿ

ಇದನರಿತೆನೆಂದೆ ಆ ಅರಿವು ಕಿರಣವನೆ ನುಂಗಿತೊಂದು ಮೇಘ
ಆ ಮುಗಿಲ ಬಸಿರನೆ ಬಗೆದು ಬಂತು ನವಕಿರಣ ಒಂದಮೋಘ
ಹಿಡಿದ ಹೊನ್ನೆ ಮಣ್ಣಹದು ಮಣ್ಣೊಳು ಹೊಳೆದುದುಂಟು ಹೊನ್ನು
ಇದು ಹೀಗೆ ಎಂಬ ನಂಬುಗೆಯ ಊರುಗೋಲಿಲ್ಲ ಇನ್ನು ಮುನ್ನು

ಆಶೆ ಎಂಬ ತಳವೊಡೆದ ದೋಣಿಯಲಿ ದೂರ ತೀರ ಯಾನ
ಯಾರ ಲೀಲೆಗೊ ಯಾರೊ ಏನೊ ಗುರಿ ಇರದೆ ಬಿಟ್ಟ ಬಾಣ
ಇದು ಬಾಳು ನೋಡು ಇದ ತಿಳಿದೆನೆಂದರು ತಿಳಿದ ಧೀರನಿಲ್ಲ
ಹಲವುತನದ ಮೈ ಮರೆಸುವಾಟವಿದು ನಿಜವು ತೋರದಲ್ಲ

ರಚನೆ: ಗೋಪಲಕೃಷ್ಣ ಅಡಿಗರು
ಗಾಯನ: ಕಾಳಿಂಗರಾವ್

ಸಾರ್ಥ ಕ'ಥೆ'ಯ ಭಾವ (ಎಸ್. ಎಲ್. ಭೈರಪ್ಪನವರ ಸಾರ್ಥ ಕಾದಂಬರಿಯ ಒಂದು ಪಕ್ಷಿ ನೋಟ )

ಸಾರ್ಥ ಕ ' ಥೆ ' ಯ ಭಾವ ಸಾರ್ಥ ಎಂಬುದು ವಾಣಿಜ್ಯ ಪದ್ಧತಿ . ಎಂಟನೇ ಶತಮಾನದಲ್ಲಿ ಆನೆ , ಕುದುರೆ , ಹೇಸರಗತ್ತೆ ಹೀಗೆ ನೂರಾರು ಗಾಡಿಗಳ ಮೇಲೆ ...