Saturday, April 25, 2009

ಸುಪ್ರಭಾತ

ಸುಪ್ರಭಾತ

ಎಳು ಕಂದಮ್ಮ ನಿ ಬೆಳಗಾಯಿತು
ಎದ್ದೇಳು ಕಂದ ನಿ ಬೆಳಗಾಯಿತು

ಚಂದ ಮಾಮನು ಮನೆಗೆ ಹೊರಟಾಯಿತು.
ಮೂಢಣದಿ ಕಿರಣಗಳು ಮನೆ ಸೇರಿತು
ಚುಕ್ಕಿ ಬಾನಲಿ ಕೂಡ ಮರೆಯಾಯಿತು
ಪಕ್ಷಿ ಸಂಕುಲ ಎದ್ದು ಹಾರಾಡಿತು

ಗಂಟೆ ನಾದದಿ ಗುಡಿಯು ತೆರೆದಾಯಿತು
ವೇದ ಘೋಷದಿ ದಿನವು ಶುರುವಾಯಿತು
ಮಂಜು ಎಲೆಗಳ ಮೇಲೆ ನಲಿದಾಡಿತು
ಮನೆಯ ಮುಂದಿನ ರಂಗೋಲಿ ಕುಣಿದಾಡಿತು.

ಎಳು ಕಂದಮ್ಮ ನಿ ಬೆಳಗಾಯಿತು
ಎದ್ದೇಳು ಕಂದ ನಿ ಬೆಳಗಾಯಿತು

ಚಿ.ಸ.ನ

Tuesday, April 7, 2009

ರವಿಯು ಎಲ್ಲಿಗೆ ಹೋದನು?

ರವಿಯು ಎಲ್ಲಿಗೆ ಹೋದನು?
ಚೌಕಕ್ಕೆ ಭಾರಕ್ಕೆ ಸೋತಿತ್ತು ನನ್ನ ಮನ
ಗಜ್ಜುಗ ವಾಟದಿ ಗಲೀಜಾದ ಚಡ್ಡಿ
ಕುಂಟುತ್ತ ಓಡುತ್ತ ವಿಶ್ರಾಂತಿ ಪಡೆಯುತ್ತಾ
ಕದ್ದ ಮಾವಿನ ಕಾಯಿ ಚಪ್ಪರಿಸಿತ್ತು ಬಾಯಿ

ರಾಮನ ನಿಷ್ಟೆಯಲಿ ಹನುಮನ ಭಕ್ತಿಯಲಿ
ಭೀಮನ ಬಲದಲ್ಲಿ ಕತೆಯಲ್ಲಿ ಮುಳುಗಿದ್ದೆ
ನರಿ, ಸಿಂಹ, ಮೊಲಗಳ ನೀತಿ ಕತೆಯನು
ಕೇಳಿ, ಬೆಳೆದಿದ್ದೆ ನಾ ಪುಟ್ಟ ಬಾಲಕನಾಗಿ

ಹುರಿಹಿಟ್ಟು ತಂಬಿಟ್ಟು ಕೈತುತ್ತು ನಾತಿಂದೆ
ಹಾಲ್ಗಿಣ್ಣು ಮೊಸರು ಮಜ್ಜಿಗೆ ಹರಿದಿತ್ತು
ಹುರಿಗಾಳು ಚಕ್ಕುಲಿ ತೆನ್ಕೊಳಲು ಸೇವೆ
ಅಕ್ಕರೆಯ ಲಾಲಿ ಸೆರೆಗೊಳಗೆ ನಿದ್ದೆ

ಕಳೆದಿತ್ತು ಬೇಸಿಗೆ, ಮರಳಿದ್ದೆ ಗೂಡಿಗೆ
ಹೊತ್ತು ನಾ ಅಜ್ಜಿ ತಾತರ ನೆನಪು
ಮುಂದಿನ ಬೆಂಚಲ್ಲಿ, ಮುಂದಿನ ತರಗತಿಯಲಿ
ಮಾಸ್ತರರು ಕೇಳಿದರು, "ರವಿಯು ಎಲ್ಲಿಗೆ ಹೋದನು?".

ಚಿ.ಸ.ನ.

Saturday, April 4, 2009

ಪುಂಡನ ಏರ‍ೋಪ್ಲೇನು

ಪುಂಡನ ಏರ‍ೋಪ್ಲೇನು

ಡೊಳ್ಳು ಹೊಟ್ಟೆಯ
ಉದ್ದನೆ ಮೂತಿಯ
ಕೆಂಪನೆ ಬತ್ತಿಯ
ನಾಲ್ಕು ಚಕ್ರದ ಗಾಡಿ

ಎನಿದು ಗೊತ್ತೇನು
ಪುಂಡನ ಏರ‍ೋಪ್ಲೇನು

ಪುಂಡನು ನೂಕುತ
ಪುಂಡನು ಆಡುತ
ಪುಂಡನು ಒದೆಯುತ
ಪುಂಡನು ಎಸೆಯುತ

ಎನಿದು ಗೊತ್ತೇನು
ಪುಂಡನ ಏರ‍ೋಪ್ಲೇನು

ಎಡಗೈಲಿ ಮೂತಿ
ಬಲಗೈಲಿ ಹೊಟ್ಟೆ
ತಲೆಮೇಲೆ ಚಕ್ರ
ಚೂರ್ ಚೂರ್ ಕೆಂಪನೆ ಬತ್ತಿ

ಎನಿದು ಗೊತ್ತೇನು
ಪುಂಡನ ಏರ‍ೋಪ್ಲೇನು

- ಚಿ.ಸ.ನ

ಸಾರ್ಥ ಕ'ಥೆ'ಯ ಭಾವ (ಎಸ್. ಎಲ್. ಭೈರಪ್ಪನವರ ಸಾರ್ಥ ಕಾದಂಬರಿಯ ಒಂದು ಪಕ್ಷಿ ನೋಟ )

ಸಾರ್ಥ ಕ ' ಥೆ ' ಯ ಭಾವ ಸಾರ್ಥ ಎಂಬುದು ವಾಣಿಜ್ಯ ಪದ್ಧತಿ . ಎಂಟನೇ ಶತಮಾನದಲ್ಲಿ ಆನೆ , ಕುದುರೆ , ಹೇಸರಗತ್ತೆ ಹೀಗೆ ನೂರಾರು ಗಾಡಿಗಳ ಮೇಲೆ ...