Tuesday, May 5, 2009

ಇಷ್ಟು ಕಾಲ ಒಟ್ಟಿಗಿದ್ದು

ರಚನೆ : ಹೆಚ್. ಎಸ್. ವೆಂಕಟೇಶಮೂರ್ತಿ

ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರು
ಅರಿತೆವೇನು ನಾವು ನಮ್ಮ ಅಂತರಾಳವಾ?

ಕಡಲ ಮೇಲೆ ಸಾವಿರಾರು ಮೈಲಿ ಸಾಗಿಯೂ
ನೀರಿನಾಳ ತಿಳಿಯಿತೇನು hayidONige....?

ಸದಾ ಕಾಲ ತಬ್ಬುವಂತೆ ಮೇಲೆ ಬಾಗಿಯೂ....ಮಣ್ಣ
ಮುತ್ತು ದೊರಕಿತೇನು ನೀಲಿ ಬಾನಿಗೆ....?

ಸಾವಿರಾರು ಮುಖದ ಚೆಲುವ ಹಿಡಿದು ತೋರಿಯೂ
ಒಂದಾದರೂ ಉಳಿಯಿತೇನು ಕನ್ನಡಿಯ ಪಾಲಿಗೆ....?

Saturday, April 25, 2009

ಸುಪ್ರಭಾತ

ಸುಪ್ರಭಾತ

ಎಳು ಕಂದಮ್ಮ ನಿ ಬೆಳಗಾಯಿತು
ಎದ್ದೇಳು ಕಂದ ನಿ ಬೆಳಗಾಯಿತು

ಚಂದ ಮಾಮನು ಮನೆಗೆ ಹೊರಟಾಯಿತು.
ಮೂಢಣದಿ ಕಿರಣಗಳು ಮನೆ ಸೇರಿತು
ಚುಕ್ಕಿ ಬಾನಲಿ ಕೂಡ ಮರೆಯಾಯಿತು
ಪಕ್ಷಿ ಸಂಕುಲ ಎದ್ದು ಹಾರಾಡಿತು

ಗಂಟೆ ನಾದದಿ ಗುಡಿಯು ತೆರೆದಾಯಿತು
ವೇದ ಘೋಷದಿ ದಿನವು ಶುರುವಾಯಿತು
ಮಂಜು ಎಲೆಗಳ ಮೇಲೆ ನಲಿದಾಡಿತು
ಮನೆಯ ಮುಂದಿನ ರಂಗೋಲಿ ಕುಣಿದಾಡಿತು.

ಎಳು ಕಂದಮ್ಮ ನಿ ಬೆಳಗಾಯಿತು
ಎದ್ದೇಳು ಕಂದ ನಿ ಬೆಳಗಾಯಿತು

ಚಿ.ಸ.ನ

Tuesday, April 7, 2009

ರವಿಯು ಎಲ್ಲಿಗೆ ಹೋದನು?

ರವಿಯು ಎಲ್ಲಿಗೆ ಹೋದನು?
ಚೌಕಕ್ಕೆ ಭಾರಕ್ಕೆ ಸೋತಿತ್ತು ನನ್ನ ಮನ
ಗಜ್ಜುಗ ವಾಟದಿ ಗಲೀಜಾದ ಚಡ್ಡಿ
ಕುಂಟುತ್ತ ಓಡುತ್ತ ವಿಶ್ರಾಂತಿ ಪಡೆಯುತ್ತಾ
ಕದ್ದ ಮಾವಿನ ಕಾಯಿ ಚಪ್ಪರಿಸಿತ್ತು ಬಾಯಿ

ರಾಮನ ನಿಷ್ಟೆಯಲಿ ಹನುಮನ ಭಕ್ತಿಯಲಿ
ಭೀಮನ ಬಲದಲ್ಲಿ ಕತೆಯಲ್ಲಿ ಮುಳುಗಿದ್ದೆ
ನರಿ, ಸಿಂಹ, ಮೊಲಗಳ ನೀತಿ ಕತೆಯನು
ಕೇಳಿ, ಬೆಳೆದಿದ್ದೆ ನಾ ಪುಟ್ಟ ಬಾಲಕನಾಗಿ

ಹುರಿಹಿಟ್ಟು ತಂಬಿಟ್ಟು ಕೈತುತ್ತು ನಾತಿಂದೆ
ಹಾಲ್ಗಿಣ್ಣು ಮೊಸರು ಮಜ್ಜಿಗೆ ಹರಿದಿತ್ತು
ಹುರಿಗಾಳು ಚಕ್ಕುಲಿ ತೆನ್ಕೊಳಲು ಸೇವೆ
ಅಕ್ಕರೆಯ ಲಾಲಿ ಸೆರೆಗೊಳಗೆ ನಿದ್ದೆ

ಕಳೆದಿತ್ತು ಬೇಸಿಗೆ, ಮರಳಿದ್ದೆ ಗೂಡಿಗೆ
ಹೊತ್ತು ನಾ ಅಜ್ಜಿ ತಾತರ ನೆನಪು
ಮುಂದಿನ ಬೆಂಚಲ್ಲಿ, ಮುಂದಿನ ತರಗತಿಯಲಿ
ಮಾಸ್ತರರು ಕೇಳಿದರು, "ರವಿಯು ಎಲ್ಲಿಗೆ ಹೋದನು?".

ಚಿ.ಸ.ನ.

Saturday, April 4, 2009

ಪುಂಡನ ಏರ‍ೋಪ್ಲೇನು

ಪುಂಡನ ಏರ‍ೋಪ್ಲೇನು

ಡೊಳ್ಳು ಹೊಟ್ಟೆಯ
ಉದ್ದನೆ ಮೂತಿಯ
ಕೆಂಪನೆ ಬತ್ತಿಯ
ನಾಲ್ಕು ಚಕ್ರದ ಗಾಡಿ

ಎನಿದು ಗೊತ್ತೇನು
ಪುಂಡನ ಏರ‍ೋಪ್ಲೇನು

ಪುಂಡನು ನೂಕುತ
ಪುಂಡನು ಆಡುತ
ಪುಂಡನು ಒದೆಯುತ
ಪುಂಡನು ಎಸೆಯುತ

ಎನಿದು ಗೊತ್ತೇನು
ಪುಂಡನ ಏರ‍ೋಪ್ಲೇನು

ಎಡಗೈಲಿ ಮೂತಿ
ಬಲಗೈಲಿ ಹೊಟ್ಟೆ
ತಲೆಮೇಲೆ ಚಕ್ರ
ಚೂರ್ ಚೂರ್ ಕೆಂಪನೆ ಬತ್ತಿ

ಎನಿದು ಗೊತ್ತೇನು
ಪುಂಡನ ಏರ‍ೋಪ್ಲೇನು

- ಚಿ.ಸ.ನ

Saturday, March 21, 2009

ಆ ನಾಲ್ಕು ಜನ...

ಆ ನಾಲ್ಕು ಜನ...
ಆ ನಾಲ್ಕು ಜನ ಪುಂಡು ಹುಡುಗರೇ... ಒಬ್ಬಬ್ಬರಿಗೆ ಒಂದೊಂದು ಅಡ್ಡ ಹೆಸರುಗಳು....ಎಲ್ಲರು ಪ್ರಾಯಕ್ಕೆ ಬಂದಿರೋರೆ..... ಮೊದಲನೆಯವನು ಕರಿಯ, ದಪ್ಪಗೆ, ಕಪ್ಪಗೆ, ಗುಂಡು ಗುಂಡಾಗಿ ಇದ್ದಾನೆ. ಎರಡನೆಯವನು ಕೆಂಚ... ಸ್ವಲ್ಪ ಕೆಂಪು ಕೆಂಪಾಗಿ ಇದ್ದಾನೆ. ಇನ್ನೊಬ್ಬ ಬಿಳಿಯ ಯಾವಾಗಲು ನಾಣಿ ಜೊತೇನೆ ಇರುತ್ತಾನೆ....
ನಮ್ಮ ಏರಿಯ ದಲ್ಲಿ ಎಲ್ಲರಿಗು ಈ ನಾಲ್ಕು ಜನ ಅಚ್ಚು ಮೆಚ್ಚು. ಎಲ್ಲರ ಮನೆ ಕಡೆಗೂ ಇವರು ಗಮನ ಹರಿಸ್ತಾರೆ. ಯಾವುದೇ ಬೇಧ, ಭಾವ ಇಲ್ಲದೆ ಎಲ್ಲರ ಮನೇಲೂ ಕೊಟ್ಟದ್ದು ತಿನ್ನುತ್ತಾರೆ. ಸ್ವಲ್ಪ ಪುಂಡರು ಕೂಡ. ರಸ್ತೇಲಿ ಜಗಳಕ್ಕೆ ನಿಂತರೆ ನಾವ್ಯಾರದ್ರು ಗದರಿಸಿ ಕಳಿಸಬೇಕು.
ನಮ್ಮ ಮನೆ ಎದುರಿಗಿನ ಪಾರ್ಕ್ ಇವರಿಗೆ ಒದ್ದು ರೀತಿ ಅಡ್ಡ. ಅಲ್ಲಿ ಬರೋ ಹೆಣ್ಣು ಮಕ್ಕಳನ್ನ ಚುಡಾಯಿಸೋದು ದಿನ ನಿತ್ಯದ ಕೆಲಸ. ಮೊನ್ನೆ ಪಕ್ಕದ ರೋಡಿನ ಹೆಂಗಸು ತನ್ನ ಮೂರು ಮಕ್ಕಳ ಜೊತೆ ನಮ್ಮ ಮನೆ ಹತ್ತಿರ ಬಂದಿದ್ದಾಗ ನಾನು ಆಕೆಯ ಮಗುವನ್ನು ಮುದ್ದು ಮಾಡುತ್ತಾ ಇದ್ದೆ... ಕರಿಯ ಅಲ್ಲೇ ದೂರದಲ್ಲಿ ನಿಂತು ಹೊಂಚು ಹಾಕುತ್ತ ಇದ್ದ. ನಾನು ನೋಡು ನೋಡುತ್ತಾನೆ ಅವಳ ಹಿಂದೆ ಹೋರಾಟ. ಒಂದು ರೀತಿ ಅವಳ ಸಹಕಾರಾನು ಇತ್ತು ಅನ್ನಿ.
ನಮ್ಮ ಕರಿಯನಿಗೆ ಸ್ಥಿತಿ ವಂತರ ಮನೆ ಹೆಣ್ಣು ಮಕ್ಕಳನ್ನು ಕಂಡರೆ ಒಂದು ರೀತಿ ಪ್ರೀತಿ ಜಾಸ್ತಿ. ಚೆನ್ನಾಗಿ ಸಾಕಿರುತ್ತಾರೆ, ಮುದ್ದು ಮುದ್ದಾಗಿ ಬೇರೆ ಇರುತ್ತಾರೆ, ಜೊತೆಗೆ ಬಾಡಿ ಗಾರ್ಡ್ ಗಳು ಬೇರೆ.... ನಮ್ಮ ಕರಿಯ ಬಾಡಿ ಗಾರ್ಡ್ ಗಳಿಗೆ ಕಣ್ಣಿಗೆ ಮಣ್ಣು ಎರಚಿ ಈ ಹೆಣ್ಣು ಮಕ್ಕಳ ಹಿಂದೆ ಓಡಾಡುತ್ತ ಇರುತ್ತಾನೆ. ಆ ಹುಡುಗೀರಿಗೂ ನಮ್ಮ ಕರಿಯಣ್ಣ ಕಂಡ್ರೆ ಆಸೇನೆ.... ಆದ್ರೆ ಮನೆಯವರು ಬಿಡಬೇಕಲ್ಲ... ಅವರ ಅವರ ಮನೆ ಸಂಪ್ರದಾಯ.....
ಕೆಂಚ ಸ್ವಲ್ಪ ಕರಿಯನಿಗೆ ಹೆದುರುತ್ತಾನೆ. ಅವನು ಇಲ್ಲದೆ ಇದ್ದಾಗ ನಮ್ಮ ಮನೆಗೆ ಬಂದು ಹೋಗುತ್ತಾನೆ. ಹುಡುಗೀರ ವಿಷಯದಲ್ಲಿ ಮಾತ್ರ ಮೂರು ಜನಾನು ಒಂದೇ.
ನಮ್ಮ ಏರಿಯ ಗೆ ಯಾರೇ ಹೊಸಬರು ಬಂದ್ರು ವಿಚಾರಿಸಿಕೊಳ್ಳುತ್ತಾರೆ. ಹೊರಗಿನವರ ಜೊತೆ ಜಗಳಕ್ಕೆ ನಿಂತರೆ ಒಮ್ಮೊಮ್ಮೆ ಕ್ರೋರಿಗಳು ಆಗಿರುತ್ತಾರೆ. ಕೆಲವೊಮ್ಮೆ ಇವರ ಜಗಳ ಪಕ್ಕದ ಬೀದಿ ಹುಡುಗರ ಜೋತೆನು ನಡೀತಾ ಇರುತ್ತೆ. ಎಷ್ಟೋ ಸಲ ನಾನೇ ಹೋಗಿ ಬಿಡಿಸಿದ್ದೀನಿ.
ಆದರು ಏನೋ ಇವರನ್ನೆಲ್ಲಾ ಕಂಡ್ರೆ ನಮಗೂ ಒಂದು ಥರ ಪ್ರೀತಿ. ಇವರಿಲ್ಲದೆ ನಮ್ಮ ದಿನ ಶುರು ಆಗೋದೇ ಇಲ್ಲ. ದಿನ ಮುಗಿಯೋದು ಇಲ್ಲ.
ಸಮಾಜದಲ್ಲಿ ನಮ್ಮೊಂದಿಗೆ ಹೊಂದಿಕೊಂಡು ಬಾಳುತ್ತಿರುವ ಈ ಡೊಂಕು ಬಾಲದ ನಾಯಕರುಗಳನ್ನು ಕೊಲ್ಲುವುದು ಬೇಡ ಅಲ್ಲವೇ. ಸಂತಾನ ಹರಣ ಚಿಕಿತ್ಸೆ ಸಾಕು ಅನ್ನಿಸುತ್ತೆ.
ಚಿ.ಸ.ನ.

Saturday, March 14, 2009

ರೋಸೆವಿಲೆನಲ್ಲಿ ಉಪಾಕರ್ಮ...

ರೋಸೆವಿಲೆನಲ್ಲಿ ಉಪಾಕರ್ಮ...
ಅಲಾರಂ ಗಡಿಯಾರ ಬೆಳಿಗ್ಗೆ ೫ ಗಂಟೆಗೆ ಹೊಡೆದು ಕೊಳ್ಳುತ್ತಾ ಇತ್ತು. ಎದ್ದು ತಲೆ ಮೇಲೆ ಮಟೊವರೆಗೂ ಸುಮ್ಮನೆ ಇರಲಿಲ್ಲ. ಕಡೆಗೂ ತಲೆ ಮೇಲೆ ಮಟ್ಟಿ ಮಲಗಿ ಕೊಂಡೆ. ಸ್ವಲ್ಪ ಹೊತ್ತಿಗೆ ಆಗಲೇ ಫೋನ್ ರಿಂಗ್ ಆಗೋಕೆ ಶುರು ಆಯಿತು. ಬೆಳಿಗ್ಗೆ ೫:೩೦ಕ್ಕೆ ಏಳಬೇಕು ಅನ್ನೋ ಒಂದೇ ಉದ್ದೇಶದಿಂದ ಹೋಟೆಲ್ ನವರಿಗೆ ಎಬ್ಬಿಸೋಕೆ ಹೇಳಿದ್ದೆ. ಅಂತು ಕಡೆಗೆ ಎದ್ದು ಕೂತೆ.
ಯಾಕೆ ಬೆಳಿಗ್ಗೆ ಬೇಗ ಎದ್ದೆ? ಮುಂದೇನು? ಇದಕ್ಕೆಲ್ಲ ಒಂದೇ ಉತ್ತರ, ಇವತ್ತು ಋಗ್ವೇದ ಉಪಾಕರ್ಮ. ನಮ್ಮ ತಂದೆಯವರು ಹೇಳಿದ್ರು ಭಾರತೀಯ ಕಾಲಮಾನದ ಪ್ರಕಾರ ಸಾಯಂಕಾಲದ ಒರೆಗೆ ಉಪಾಕರ್ಮ ಇರುತ್ತೆ. ನೀನು ಬೆಳಿಗ್ಗೆ ಬೇಗ ಎದ್ದು ಜನಿವಾರ ಬದಲಾಯಿಸು ಅಂತ.
ಅಂತು ಎದ್ದಿದ್ದಾಯಿತು, ಇನ್ನು ಶುಭ್ರವಾಗಬೇಕು. ಸಾಮಾನ್ಯವಾಗಿ ತಲೆಗೆ ನೀರು ಹಾಕಿಕೊಳ್ಳೋದು ವಾಡಿಕೆ. ಅಲ್ಲಿ ಎಲ್ಲಿಂದಆಗಬೇಕು... ಶಾಂಪೂ ನಲ್ಲಿ ಮಡಿ ಆಗಿ ಮಡಿ ಪಂಚೆ ಉಟ್ಟು ರೆಡಿ ಆದೆ.
ಅಮ್ಮ ಹೇಳಿದ್ದು ಜ್ಞಾಪಕಕ್ಕೆ ಬಂತು. ಸರಿಯಾಗಿ ನೋಡಿಕೋ.. ನಿನ್ನ ದೊಡ್ಡ ಪೆಟ್ಟಿಗೇಲಿ ಮರದ ಡಬ್ಬದಲ್ಲಿ ಜನಿವಾರ ಇಟ್ಟಿದ್ದೀನಿ ಅಂತ. ಮರದ ಡಬ್ಬ ತೆಗೆದೆ... ಮರದ ಡಬ್ಬದಲ್ಲಿ ಕಂಡಿದ್ದೇನು? ಯಶೋದೆ ಕೃಷ್ಣನ ಬಾಯಲ್ಲಿ ಪ್ರಪಂಚ ಕಂಡ ಹಾಗೆ ನನ್ನ ದಿನ ನಿತ್ಯದ ಅರ್ಧ ವಸ್ತು ಗಳು ಅದರಲ್ಲೇ ಇತ್ತು. ಬಾಚಣಿಗೆ, ಕೊಬ್ಬರಿ ಎಣ್ಣೆ, ನಿವಿಯ ಪೌಡರ್ ಇತ್ಯಾದಿ.... ಇಷ್ಟೆಲ್ಲಾ ಅದ್ರಲ್ಲಿ ಹೇಗೆ ಅಡಗಿತ್ತೋ ಗೊತ್ತಿಲ್ಲ. ಡಬ್ಬದ ಒಂದು ಮೂಲೇಲಿ ಜನಿವಾರ ಕೂತಿತ್ತು. ಜನಿವಾರದ ಪಕ್ಕದಲ್ಲಿ ಉಪಾಕರ್ಮ ಮಾಡಿಸೋ ಪುಸ್ತಕಾನು ರೆಡಿ ಇತ್ತು.
ನಾನು ಉಪಕರ್ಮಕ್ಕೆ ರೆಡಿ ಆದೆ. ಸಂದ್ಯಾವಂದನೆ ಮಾಡೋದು ಪೂರ್ವಕ್ಕೆ ಮುಖ ಮಾಡಿಕೊಂಡು ಅಂತ ಗೊತ್ತಿತ್ತು. ಭಾರತದಲ್ಲಿ ಎಲ್ಲರ ಮನೆ ಉಪಕರ್ಮನು ಮುಗಿಸಿಕೊಂಡು ಬರುತ್ತಿದ್ದ ಸೂರ್ಯನ್ನ ನೋಡಿದೆ. ನಾನಂತೂ ಅವನ್ನ ಪೂರ್ತಿಯಾಗಿ ನಂಬಿದ್ದೇನೆ. ಯಾಕೆಂದ್ರೆ ನಾನು ಪೂರ್ವಕ್ಕೆ ಮುಖ ಮಾಡಿ ಕೂರಲೇ ಬೇಕಾಗಿತ್ತು.
ಇಷ್ಟಕ್ಕೆ ತೊಂದರೆ ತಪ್ಪಲಿಲ್ಲ... ಅಮ್ಮ ಎಷ್ಟೇ ಹೇಳಿದ್ರು "ಪಂಚ ಪಾತ್ರೆ" ,"ಉದ್ದರಣೆ", ತಂದಿರಲಿಲ್ಲ. ಎರಡು ಗಾಜಿನ ಲೋಟ, ಎರಡು ಚಮಚ, ಒಂದು ಪಿಂಗಾಣಿ ಪಾತ್ರೆ ರೆಡಿ ಮಾಡಿದೆ. ನೆಲದ ಮೇಲೆ ಬೇರೆ ಕೂರೋ ಹಾಗಿಲ್ಲ.. ಕಾರ್ಪೆಟ್ ಹಾಕಿ ಬಿಟ್ಟಿದ್ದಾರೆ. ಏನು ಮಾಡಲಿ, ಚಾಪೆ ಬೇರೆ ತಂದಿಲ್ಲ... ಕಡೆಗೆ ಮನೆ ಇಂದ ತಂದಿದ್ದ ಒಂದು ಟವೆಲ್ ನ ಹಾಕಿ ಕೊಂದು ಪೂರ್ವಕ್ಕೆ ಮುಖ ಮಾಡಿ ಕೂತು ಕೊಂಡೆ.
ಸಂದ್ಯಾವಂದನೆ ಪುಸ್ತಕದಲ್ಲಿ ನಮ್ಮ ಪಿತೃಶ್ರಿ ಯವರು ನನಗೆ ಬೇಕಾಗಿರೂ ಹಾಳೆಗಳನ್ನ ಮದಿಸಿಟ್ಟಿದ್ದರು. ಎಲ್ಲ ರೆಡಿ ಆಯಿತು. ಮೂಗು ಹಿಡಿದು ಮಂತ್ರ ಹೇಳೋಕೆ ಶುರು ಮಾಡಿದೆ.
ಆ ಪುಸ್ತಕದಲ್ಲಿ ಕೆಲವು ಸಾಲುಗಳು ಹೀಗಿತ್ತು. .........................ಸಂವತ್ಸರೇ........... ಆಯಿನೆ........ ಋತು...........ಮಾಸೆ... ಇತ್ಯಾದಿ......
ಮತ್ತೆ ಕಷ್ಟಕ್ಕೆ ಸಿಕ್ಕಿ ಹಾಕಿ ಕೊಂಡಿದ್ದೆ. ಮನೆಗೆ ಕರೆ ಮಾಡ್ದೆ ಬೇರೆ ವಿಧಿನೆ ಇರಲಿಲ್ಲ. ನಿನ್ನೆ ಇನ್ನು $ ೧೦ ದೂರವಾಣಿ ಕಾರ್ಡ್ ತೊಗೊಂಡಿದ್ದೆ. ಎಷ್ಟೇ ಪ್ರಯತ್ನ ಪಟ್ಟರು ಕಾರ್ಡ್ ಬಳಸಿ ತುಮಕೂರಿಗೆ ಲೈನ್ ಸಿಗಲಿಲ್ಲ. ಹೋಟೆಲ್ ದೂರವಾಣಿ ಇಂದ ಮಾಡೋಣ ಅಂದು ಕೊಂಡರೆ ಅವರು ಕೊಡೊ ಬಿಲ್ ನ ೪೬ ರಿಂದ ಗುಣಿಸಿದರೆ ಭಯ ಆಗುತ್ತಿತ್ತು.
ಅಂತು ಭಾರತಿ ಜ್ಞಾಪಕಕ್ಕೆ ಬಂದ್ಲು. ಅವಳಿಗೆ ರಕ್ಷಾ ಬಂಧನಕ್ಕೆ ಬೇರೆ ಫೋನ್ ಮಾಡಬೇಕಿತ್ತು. ಅದು ಅಲ್ಲದೆ ಅವಳು ಬೆಂಗಳೂರಿನಲ್ಲಿ ಇರೋದ್ರಿಂದ ಲೈನ್ ಬೇಗ ಸಿಗುತ್ತಿತ್ತು.
ಭಾರತಿ ಮನೇಲಿ ಇರಲಿಲ್ಲ. ಅಮ್ಮನ ಮನೆಗೆ ಹೋಗಿದ್ಲು. ಅವರತ್ತೆ ಫೋನ್ ತೊಗೊಂಡ್ರು. ಯಾಕೋ ಅವರನ್ನ ಕೇಳೋಕೆ ಮನಸ್ಸಾಗಲಿಲ್ಲ. ಕುಶಲೋಪರಿ ವಿಚಾರಿಸಿ ಫೋನ್ ಇತ್ತೇ. ಅವರ ಅಮ್ಮನ ಮನೆಗೆ ಫೋನ್ ಮಾಡಿದೆ. ಅವರ ಮಾವ ಫೋನ್ ತೊಗೊಂಡ್ರು. ಕಷ್ಟ ತೋಡಿ ಕೊಂಡೆ. ನನಗೆ ಬೇಕಾದ ವಿಷಯ ತಿಳಿದು ಉಪಕರ್ಮಕ್ಕೆ ಕೂತೆ.
ಯಾರೋ ಒಬ್ಬ ಧಡೂತಿ ಹೆಂಗಸು ಕದ ತೆಗೆದು, ಧಡಾರನೆ ಒಳಕ್ಕೆ ನುಗ್ಗಿದಳು. ಬೇರೆ ದೇಶ, ಮೊದಲನೇ ದಿನ.. ಒಳ್ಳೆ ಕರ್ಮ ಅಂದು ಕೊಂಡೆ... ನೋಡು ನೋಡುತ್ತಾನೆ.. ನನ್ನ "ಪಂಚ ಪಾತ್ರೆ", "ಉದ್ದರಣೆ " ಎಲ್ಲ ತೆಗೆದು ಕೊಂದು ಹೋಗಿ ಪಾತ್ರೆ ತೊಳೆಯೋ ಮೆಶಿನ್ ಗೆ ಹಾಕಿ ಬಿಟ್ಲು. ನನ್ನ ಮಡಿ ಅಲ್ಲಿಗೆ ಆಯಿತು. ರೂಮ್ ಹೊರಗೆ " ದೋ ನಾಟ್ ಡಿಸ್ಟರ್ಬ್" ಬೋರ್ಡ್ ಹಾಕಬೇಕಿತ್ತು ಗೊತ್ತಿರಲಿಲ್ಲ.
ಅವಳು ಹೋದ ನಂತರ ಕೈ ಕಾಲು ತೊಳೆದು... "ಪಂಚ ಪಾತ್ರೆ", "ಒದ್ದರಣೆ" ರೆಡಿ ಮಾಡಿ ಕೊಂದು... ನನ್ನ ಉಪಾಕರ್ಮ ಮುಗಿಸಿದೆ....
೮ ಗಂಟೆಗೆ ಇನ್ನು ಹತ್ತು ನಿಮಿಷ ಇತ್ತು. ರೋಸೆವಿಲ್ಲೇ ಇಂದ ಸ್ಯಾನ್ ಫ್ರಾನ್ಸಿಸ್ಕೋ ಗೆ ಹೊರಡೋ ರೈಲು ೮ ಕ್ಕೆ ಇತ್ತು. ಕಷ್ಟ ಪಟ್ಟು ಟ್ಯಾಕ್ಸಿ ಹಿಡಿದು ರೈಲ್ವೆ ಸ್ಟೇಷನ್ ತಲುಪಿದೆ. ಮೊದಲೇ ಟಿಕೆಟ್ ಇದ್ದಿದ್ದರಿಂದ ಸುಲಭವಾಗಿ ರೈಲು ಸಿಕ್ಕಿತು....
ಸ್ಯಾನ್ ಫ್ರಾನ್ಸಿಸ್ಕೋ ಸ್ಟೇಷನ್ ನಲ್ಲಿ ನನ್ನ ಫ್ರೆಂಡ್ "ರೋವಿನ್" ಕಾಯ್ತಾ ಇದ್ದ.......
ಇದು ನಡೆದದ್ದು ಎರಡು ಸಾವಿರದ ಒಂದರಲ್ಲಿ... ನನ್ನ ಮೊದಲ ಅಮೇರಿಕ ಪ್ರವಾಸದಲ್ಲಿ.... ಪ್ರತಿ ಉಪಾಕರ್ಮಕ್ಕು ಇದು ಒಂದು ನೆನಪು...:)
ಚಿ.ಸ.ನ.

Saturday, March 7, 2009

ಕಾ: ಹೆಣ್ಣು ಕಾಣದ ಗಂಡು ಲೇ:ಬೀಚಿ

ನಾನು ಇತ್ತೀಚಿಗೆ ಕಾಲ ಕಳೆಯಲು ಓದಿದ ಕಾದಂಬರಿ "ಹೆಣ್ಣು ಕಾಣದ ಗಂಡು". ನನಗ್ಯಾಕೋ ಈ ಕಾದಂಬರಿ ಸರಿ ಕಾಣಲೇ ಇಲ್ಲ. ಬೀಚಿ ಅವರು ಇಡಿ ನಮ್ಮ ಸಮಾಜವೇ ಕಾಮ ಪಿಪಾಸು ಗಳಿಂದ ತುಮ್ಬಿರುವಂತೆ ಬಿಂಬಿಸಿದ್ದಾರೆ.

ಈ ಕಾದಂಬರಿ ಯಲ್ಲಿ ೩ ಮುಖ್ಯ ಪಾತ್ರಗಳು. ರಂಗಮ್ಮ - ವ್ಯಭಿಚಾರಿಣಿ. ಅನಂತ - ಸಂಗೀತ ಮೇಷ್ಟ್ರು - ಕಾಮ ಪಿಪಾಸು , ರತ್ನ - ಅಮಾಯಕೆ......

ರತ್ನನಿಗೆ ತನ್ನ ಮಾವನ ಜೊತೆ ಬಲವಂತದ ಮಾಡುವೆ. ಆತ ರೋಗಿಷ್ಟ... ಲಂಡ ಷಂಡ ಎಲ್ಲ ಹೌದು.... ರ

ನೀನಿಲ್ಲದೆ ನನಗೇನಿದೆ

ನೀನಿಲ್ಲದೆ ನನಗೇನಿದೆ
ಮನಸೆಲ್ಲ ನಿನ್ನಲ್ಲೆ ನೆಲೆಯಾಗಿದೆ
ಕನಸೆಲ್ಲ ಕಣ್ಣಲ್ಲೆ ಸೆರೆಯಾಗಿದೆ
ನೀನಿಲ್ಲದೆ ನನಗೇನಿದೆ

ನಿನಗಾಗಿ ಕಾದು ಕಾದು
ಪರಿತಪಿಸಿ ನೊಂದೆ ನಾನು
ಕಹಿಯಾದ ವಿರಹದ ನೋವು
ಹಗಲಿರುಳು ತಂದೆ ನೀನು ೨

ಎದೆಯಾಸೆ ಎನೋ ಎಂದು ನೀ ಕಾಣದಾದೆ
ನಿಶೆಯೊಂದೆ ನನ್ನಲ್ಲಿ ನೀ ತುಂಬಿದೆ
ಬೆಳಕೊಂದೆ ನಿನ್ನಿಂದ ನಾ ಬಯಸಿದೆ

ನೀನಿಲ್ಲದೆ ನನಗೇನಿದೆ
ಮನ್ಸೆಲ್ಲ ನಿನ್ನಲ್ಲೆ ನೆಲೆಯಾಗಿದೆ
ಕನಸೆಲ್ಲ ಕಣ್ಣಲ್ಲೆ ಸೆರೆಯಾಗಿದೆ
ನೀನಿಲ್ಲದೆ ನನಗೇನಿದೆ

ಒಲವೆಂಬ ಕಿರಣ ಬೀರಿ
ಒಳಗಿರುವ ಕಣ್ಣ ತೆರಿಸಿ
ಒಣಗಿರುವ ಎದೆನೆಲದಲ್ಲಿ
ಭರವಸೆಯ ಜೀವ ಹರಿಸಿ ೨

ಸೆರೆಯಿಂದ ಬಿಡಿಸಿ ನನ್ನ ಆತಂಕ ನೀಗೊ
ಹೊಸ ಜೀವೆ ನಿನ್ನಿಂದ ನಾ ಕಾಣುವೆ
ಹೊಸ ಲೋಕ ನಿನ್ನಿಂದ ನಾ ಕಾಣುವೆ

ನೀನಿಲ್ಲದೆ ನನಗೇನಿದೆ
ಮನ್ಸೆಲ್ಲ ನಿನ್ನಲ್ಲೆ ನೆಲೆಯಾಗಿದೆ
ಕನಸೆಲ್ಲ ಕಣ್ಣಲ್ಲೆ ಸೆರೆಯಾಗಿದೆ
ನೀನಿಲ್ಲದೆ ನನಗೇನಿದೆ

ಅಮ್ಮ, ನಿನ್ನ ಎದೆಯಾಳದಲ್ಲಿ...

ಅಮ್ಮ, ನಿನ್ನ ಎದೆಯಾಳದಲ್ಲಿ
ಗಾಳಕ್ಕೆ ಸಿಕ್ಕ ಮೀನು
ಮಿಡುಕಾಡುತಿರುವೆ ನಾನು

ಕಡಿಯಲೋಲ್ಲೆ ನೀ ಕರುಳಬಳ್ಳಿ
ಒಲವೂಡುತಿರುವ ತಾಯೆ,
ಬಿಡದ ಬುವಿಯ ಮಾಯೆ

ನಿನ್ನ ರಕ್ಷೆಗೂಡಲ್ಲಿ ಬೆಚ್ಚಗೆ
ಆಡಗಲಿ ಎಷ್ಟು ದಿನ ?
ದೂಡು ಹೊರಗೆ ನನ್ನ
ಓಟ ಕಲಿವೆ, ಒಳನೋಟ ಕಲಿವೆ, ನಾ
ಕಲಿವೆ ಊರ್ಧ್ವ ಗಮನ,
ಓ ಆಗಾಧ ಗಗನ

ಮೇಲೆ ಹಾರಿ, ನಿನ್ನ ಸೆಳೆತ ಮೀರಿ,
ನಿರ್ಭಾರಸ್ಥಿತಿಗೆ ತಲುಪಿ
ಬ್ರಹ್ಮಾಂಡವನ್ನೇ ಬೆದಕಿ
ಇಂಧನ ತೀರಲು, ಬಂದೇ ಬರುವೆನು
ಮತ್ತೆ ನಿನ್ನ ತೊಡೆಗೆ,
ಮೂರ್ತ ಪ್ರೇಮದೆಡೆಗೆ

-ಬಿ ಆರ್ ಲಕ್ಷ್ಮಣರಾವ್.

ಅಳುವ ಕಡಲೊಳು ತೇಲಿ ಬರುತಲಿದೆ...

ಅಳುವ ಕಡಲೊಳು ತೇಲಿ ಬರುತಲಿದೆ ನಗೆಯ ಹಾಯಿ ದೋಣಿ
ಬಿದ್ದ ಮನ ಮನದ ಕೊರಡೊಳು ಹೂವು ಹೂವು ಅರಳಿ

ಇದನರಿತೆನೆಂದೆ ಆ ಅರಿವು ಕಿರಣವನೆ ನುಂಗಿತೊಂದು ಮೇಘ
ಆ ಮುಗಿಲ ಬಸಿರನೆ ಬಗೆದು ಬಂತು ನವಕಿರಣ ಒಂದಮೋಘ
ಹಿಡಿದ ಹೊನ್ನೆ ಮಣ್ಣಹದು ಮಣ್ಣೊಳು ಹೊಳೆದುದುಂಟು ಹೊನ್ನು
ಇದು ಹೀಗೆ ಎಂಬ ನಂಬುಗೆಯ ಊರುಗೋಲಿಲ್ಲ ಇನ್ನು ಮುನ್ನು

ಆಶೆ ಎಂಬ ತಳವೊಡೆದ ದೋಣಿಯಲಿ ದೂರ ತೀರ ಯಾನ
ಯಾರ ಲೀಲೆಗೊ ಯಾರೊ ಏನೊ ಗುರಿ ಇರದೆ ಬಿಟ್ಟ ಬಾಣ
ಇದು ಬಾಳು ನೋಡು ಇದ ತಿಳಿದೆನೆಂದರು ತಿಳಿದ ಧೀರನಿಲ್ಲ
ಹಲವುತನದ ಮೈ ಮರೆಸುವಾಟವಿದು ನಿಜವು ತೋರದಲ್ಲ

ರಚನೆ: ಗೋಪಲಕೃಷ್ಣ ಅಡಿಗರು
ಗಾಯನ: ಕಾಳಿಂಗರಾವ್

Saturday, January 31, 2009

ಕಾ: ಭೀಮ ಕಾಯ ಲೇ : ಭೈರಪ್ಪ

ಭೀಮ ಕಾಯ ಒಂದು ಸರಳ ಸುಂದರ ವಿಭಿನ್ನ ಪ್ರೇಮ ಕಥಾನಕ. ಕಥೆ ಸರಳವಾಗಿದ್ದರೂ ಭೈರಪ್ಪನವರ ಅಧ್ಯಯನ ಶೀಲ ಮನೋಭಾವನೆ ಅವರ ಕಾದಂಬರಿಗಳಲ್ಲಿ ಬಿಂಬಿತವಾಗಿದೆ.

ಭಿತ್ತಿ ಕಾದಂಬರಿಯಲ್ಲಿ ಭೈರಪ್ಪನವರೇ ಹೇಳುವಂತೆ ಕುಸ್ತಿ ಪಟುಗಳ ಜೀವನವನ್ನು ಬಹಳ ಹತ್ತಿರದಿಂದ ನೋಡಿದವರು. ಇಂತದ್ದೆ ಒಂದು ಕತೆ ಈ ಭೀಮಕಾಯ.

ಸುಬ್ಬು ಎಂಬಾತ ಒಬ್ಬ ಅಪ್ರತಿಮ ಕುಸ್ತಿಪಟು. ಹನುಮಂತ ಹಾಗು ಅಂಬಾ ಭವಾನಿ ದೇವರ ಭಕ್ತ. ಮೈಸೂರು ಹಾಗು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಅವನನ್ನು ಮೀರಿಸಿದ ಕುಸ್ತಿ ಪಟು ಇರಲಿಲ್ಲ. ಸುಬ್ಬು ಮೈಸೂರು ಪ್ರಾಂತ್ಯಕ್ಕೆ ಒಬ್ಬ ಕೊರಪಿಟ್ ಆಗಿರುತ್ತಾನೆ. ತಂಜಾವೂರು, ಧಾರವಾಡ, ಬೆಂಗಳೂರು ಹೀಗೆ ಅನೇಕ ಪ್ರದೇಶಗಳಲ್ಲಿ ಕುಸ್ತಿ ಪಂದ್ಯದಲ್ಲಿ ಗೆದ್ದಿರುತ್ತಾನೆ.
ಭೈರಪ್ಪನವರು ಕುಸ್ತಿ ಅಂದರೇನು, ಗರಡಿ ಮನೆ ಹೇಗಿರುತ್ತದೆ?, ಕುಸ್ತಿ ಹೊಡೆತದ ವಿಧಾನಗಳಾವುವು, ಕುಸ್ತಿ ಪಂದ್ಯದಲ್ಲಿ ಆಗುವ ಮೋಸಗಳ ಬಗ್ಗೆ ಸವಿಸ್ತಾರವಾಗಿ ವಿವರಣೆ ನೀಡಿದ್ದಾರೆ. ಬೇರೆ ಬೇರೆ ಪ್ರಾಂತ್ಯದ ಕುಸ್ತಿ/ಕುಸ್ತಿ ಪಟು ಗಳು ಹೇಗಿರುತ್ತಾರೆಂದು ಸೊಗಸಾಗಿ ವಿವರಿಸುತ್ತಾರೆ.

ತನ್ನ ವೃತ್ತಿಯಲ್ಲಿ ಸುಬ್ಬುವಿಗೆ ಸ್ನೇಹಿತರು ಹಾಗು ದ್ವೇಷಿಗಳು ಇಬ್ಬರು ಇದ್ದರು.

ಇಂಥಹ ಒಬ್ಬ ಕುಸ್ತಿ ಪಟು ಪುಟ್ಟು ಅಂಥ ಸ್ನೇಹಿತನ ವಂಚನೆ ಇಂದ ಒಬ್ಬ ಸೂಳೆಯ ಗೆಳೆತನ ಬೆಳೆಸುತ್ತಾನೆ. ಆಕೆಯೇ ರಾಜಮ್ಮ.
ರಾಜಮ್ಮ ಸುಬ್ಬುವನ್ನು ನಿಷ್ಕಲ್ಮಶ ಮನಸ್ಸಿನಿಂದ ಪ್ರೀತಿಸುತ್ತಿರುತ್ತಾಳೆ. ದಿನ ಕಳೆದಂತೆ ಸುಬ್ಬುವು ರಾಜಮ್ಮನ ಪ್ರೀತಿಗೆ ಸಂಪೂರ್ಣವಾಗಿ ಒಳಪಡುತ್ತಾನೆ. ಆಕೆಯ ಸ್ನೇಹ ಭಾವ, ಪ್ರೀತಿ, ಎಲ್ಲಕ್ಕೂ ಮನ ಸೋಲುತ್ತಾನೆ. ಆಕೆಯನ್ನು ತನ್ಮಯ ಚಿತ್ತನಾಗಿ ಪ್ರೀತಿಸ ತೊಡಗುತ್ತಾನೆ. ನಿಧಾನವಾಗಿ ಕುಸ್ತಿಯ ಅಭ್ಯಾಸವನ್ನು ಬಿಡುತ್ತಾನೆ.

ಮೈಸೂರಿಗೆ ಕೊರಪಿಟ್ ಅಂತ ಹೆಸರು ಮಾಡಿದ ಸುಬ್ಬು ಒಬ್ಬ ಸಾಧಾರಣ ಪಂಜಾಬಿ ಕುಸ್ತಿ ಪಟುವಿಗೆ ಸೋಲುತ್ತಾನೆ. ಇತ್ತ ಸುಬ್ಬುವಿನ ಸ್ನೇಹಿತ ಚಂದ್ರು ಪುತ್ತುವಿನ ಸಹಾಯದಿಂದ ರಾಜಮ್ಮ ನನ್ನು ಬೇಟಿ ಮಾಡುತ್ತಾನೆ. ಸುಬ್ಬುವು ತನ್ನ ವೃತ್ತಿ ಜೀವನವನ್ನು ಹಾಳು ಮಾಡಿ ಕೊಲ್ಲದಂತೆ ತಡೆಯಬೇಕು ಅಂದು ಬೇಡಿ ಕೊಳ್ಳುತ್ತಾನೆ. ರಾಜಮ್ಮನಿಗೆ ಚಂದ್ರುವು ಒಬ್ಬ ಅಣ್ಣನ ರೀತಿ ಕಾಣಿಸುತ್ತಾನೆ. ತಾನು ಸುಬ್ಬುವನ್ನು ಹೇಗಾದರೂ ಮೊದಲಿನಂತೆ ಮಾಡಲು ಪ್ರಯತ್ನಿಸುತ್ತೇನೆ ಎಂದು ಹೇಳುತ್ತಾಳೆ. ರಾಜಮ್ಮ, ತನ್ನಂತವಳಿಂದ ಸುಬ್ಬುವಿನ ಜೀವನ ಹಾಳಾಯಿತಲ್ಲ ಎಂದು ದುಃಖ ಪಡುತ್ತಾಳೆ.

ಸುಬ್ಬುವನ್ನು ತನ್ನ ವೃತ್ತಿಯ ಕಡೆ ತಿರುಗಿಸಲು ಬಹಳ ಪ್ರಯತ್ನಿಸುತ್ತಾಳೆ. ಇತ್ತ ಸುಬ್ಬುವಿನ ತಂದೆ ಮರಿಯಪ್ಪನವರಿಗೆ ಸುಬ್ಬುವಿನ ಬಗ್ಗೆ ತಿಳಿಯುತ್ತದೆ. ತನ್ನ ಮಗನನ್ನು ಒಬ್ಬ ಅತ್ಯುತ್ತಮ ಕುಸ್ತಿ ಪಟು ವನ್ನಾಗಿ ಮಾಡಿ ತನ್ನ ಸ್ನೇಹಿತ ಬಸಪ್ಪನ ಮಗಳು ಗೌರಿಗೆ ಕೊಟ್ಟು ಮದುವೆ ಮಾಡಬೇಕೆಂದು ಕೊಂಡಿರುತ್ತಾನೆ. ಮಗನ ಪರಿಸ್ಥಿತಿ ನೋಡಿ ಮರಿಯಪ್ಪನವರು ಹಾಸಿಗೆ ಹಿಡಿಯುತ್ತಾರೆ. ಸುಬ್ಬುವಿಗೆ ಕಾರಣ ತಿಳಿದಿದ್ದರೂ,

ರಾಜಮ್ಮನನ್ನು ದೂರ ಮಾಡಿ ಕೊಳ್ಳಲು ಸದ್ಯವಾಗದೆ ಖಿನ್ನನಾಗುತ್ತಾನೆ.
ಇದ್ದಕಿದ್ದ ಹಾಗೆ ಒಂದು ದಿನ ಸುಬ್ಬು ಕಾಣೆಯಾಗುತ್ತಾನೆ. ಎಷ್ಟು ಹುದುಕಿಸಿದರು ಸುಬ್ಬುವಿನ ಸುಳಿವು ಇರುವಿದಿಲ್ಲ. ರಾಜಮ್ಮ ತನ್ನಿಂದ ಹೀಗೆ ಆಯಿತೆಂದು ದುಃಖ ಪಡುತ್ತಾಳೆ. ಈ ಹೊತ್ತಿಗೆ ರಾಜಮ್ಮ ಉದರದಲ್ಲಿ ಸುಬ್ಬುವಿನ ಮಗು ಬೆಳೆಯುತ್ತಿರುತ್ತದೆ. ರಾಜಮ್ಮನಿಗೆ ಸುಬ್ಬುವಿನ ಗೆಳೆತನಕ್ಕಿಂತ ಏನು ಬೇಕಾಗಿರುವುದಿಲ್ಲ.
ಚಂದ್ರುವಿಗೆ ಸುಬ್ಬುವಿನ ಕಾಗದ ಒಂದು ಬರುತ್ತದೆ. ಸುಬ್ಬುವು ತಾನು ತನ್ನ ತಂದೆಗೆ ನಂಬಿದವರಿಗೆ ಮೋಸ ಮಾಡಿದೆನೆಂದು, ತನ್ನ ತಂದೆಯ ಆಸೆಯಂತೆ ವೃತ್ತಿಯಲ್ಲಿ ಕೊರಪಿಟ್ ಆಗಬೇಕೆಂದು, ಅಂತೋನಿ ಸಹಾಯದಿಂದ ಸೊಲ್ಲಾಪುರದ ಗರಡಿ ಮನೆಯಲ್ಲಿ ಕಲಿಯುತ್ತಿರುವುದಾಗಿ ತಿಳಿಸುತ್ತಿರುತ್ತಾನೆ. ಚಂದ್ರುವು ಸಂತಸ ಗೊಂಡು ಇತರರಿಗೂ ತಿಳಿಸಿ ಸೊಲ್ಲಾಪುರದ ಕಡೆಗೆ ಹೊರಡುತ್ತಾನೆ. ರಾಜಮ್ಮ ಸುಬ್ಬುವಿಗೆ ಒಂದು ಕಾಗದವನ್ನು ಕೊಡುತ್ತಾಳೆ.
ಚಂದ್ರು ಸುಬ್ಬು ಬದಲಾದುದನ್ನು ಕಂಡು ಸಂತೋಷ ಪಡುತ್ತಾನೆ. ಸುಬ್ಬುವಿನ ವೃತ್ತಿ ಜೀವನ ಹಾಳು ಮಾಡಲು ಮೈಲಾರಿ ಮತ್ತು ಸ್ನೇಹಿತರು ಕುತಂತ್ರ ಮಾಡಿ ರಾಜಮ್ಮನ ಪರಿಚಯ ಸುಬ್ಬುವಿಗೆ ಮಾಡಿಸಿದುದು ತಿಳಿಯುತ್ತದೆ. ಆದರೆ ರಾಜಮ್ಮ ದೇವತೆಯಂತ ಹೆಂಗಸು ಎಂಬುದು ಅರಿವಿರುತ್ತದೆ.
ಸುಬ್ಬು ಮತ್ತೆ ಮೊದಲಿನ ಸುಬ್ಬು ವಾಗಿರುತ್ತಾನೆ. ಹಲವಾರು ಕುಸ್ತಿಗಳಲ್ಲಿ ಗೆದ್ದಿರುತ್ತಾನೆ. ಚಂದ್ರು ಸುಬ್ಬುವಿಗೆ ತಿಳಿಸಿ ಪಂಜಾಬಿ ಕುಸ್ತಿ ಪಟುವಿನ ಮೇಲೆ ಬಾಜಿ ಕಟ್ಟಿಸುತ್ತಾನೆ. ಈ ಭಾರಿ ಸುಬ್ಬು ಒಂದೇ ಬಾರಿಗೆ ಪಂಜಬಿಯನ್ನು ಸೋಲಿಸಿ ಮೈಸೂರಿಗೆ ಕೊರಪಿಟ್ ಆಗುತ್ತಾನೆ.
ಸುಬ್ಬು ರಾಜಮ್ಮನ್ನನ್ನು ಬೇಟಿ ಮಾಡುತ್ತಾನೆ. ತನ್ನ ಮಗುವನ್ನು ನೋಡಿ ಸಂತೋಷ ಪಡುತ್ತಾನೆ. ರಾಜಮ್ಮ ಸುಬ್ಬುವಿಗೆ ಗೌರಿ ಯನ್ನು ಮದುವೆಯಾಗಬೇಕೆಂದು ಹಾಗು ತನ್ನ ಸ್ನೇಹವನ್ನು ಮುಂದುವರಿಸಬೇಕೆಂದು ಕೋರಿ ಕೊಳ್ಳುತ್ತಾಳೆ. ಕಡೆಗೆ ಸುಬ್ಬು ಒಪ್ಪಿ ಗೌರಿಯನ್ನು ಮದುವೆ ಮಾಡಿ ಕೊಳ್ಳುತ್ತಾನೆ. ಗೌರಿಗೆ ತನ್ನ ಜೀವನದ ಪೂರ ವೃತ್ತಾಂತ ವನ್ನು ತಿಳಿಸುತ್ತಾನೆ. ರಾಜಮ್ಮನಿಗೆ ಒಳ್ಳೆಯ ಸ್ನೇಹಿತನಾಗಿ ಮುಂದುವರೆಯುತ್ತಾನೆ.

ಕಾದಂಬರಿಯಲ್ಲಿ ರಾಜಮ್ಮನಿಗೆ ಸುಬ್ಬು ಮೋಸ ಮಾಡಿದ ಅನ್ನಿಸದರೂ, ರಾಜಮ್ಮನ ತ್ಯಾಗ ಎದ್ದು ನಿಲ್ಲುತ್ತದೆ. ಭೈರಪ್ಪನವರ ಕಾದಂಬರಿಯಲ್ಲಿ ಹೆಣ್ಣಿಗೆ ವಿಶಿಷ್ಟ ಸ್ಥಾನ ಕೊಟ್ಟಿರುವುದನ್ನು ನಾವು ನೋಡಬಹುದು.
ಚಿ.ಸ.ನ.

Monday, January 19, 2009

ಕಾ :ಧರ್ಮರ್ಶಿ ಲೇ :ಭೈರಪ್ಪ ಅಂಕ :೩.೫/೫

ಇತ್ತೀಚಿಗೆ ಓದಿದ ಅತ್ಯುತ್ತಮ ಕಾದಂಬರಿಗಳಲ್ಲಿ ಇದು ಒಂದು. ಇತರೆ ಧರ್ಮಗಳಿಂದ ಹಿಂದೂ ಧರ್ಮಕ್ಕೆ ಆಗುತ್ತಿರುವ ಅತ್ಯಾಚಾರ ದ ವಿರುದ್ದ ಧನಿ ಎತ್ತಿರುವ ಕಾದಂಬರಿಯಾಗಿದೆ. ತಲೆ ತಲಾಂತರದಿಂದ ಹಿಂದೂ ಧರ್ಮದ ಮೇಲೆ ಮತಾಂತರದ ಭೂತ ಕಾಡುತ್ತಿದೆ. ಹಿಂದೂ ಧರ್ಮದ ಕೆಲವು ನ್ಯೂನ್ಯತೆಗಳನ್ನು ವೈಭವಿಕರಿಸಿ, ಹಣದ ಆಮಿಷ ಒಡ್ಡಿ ಅಮಾಯಕರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುತ್ತಿರುವದು ಒಂದು ಕ್ರೌರ್ಯವೆ ಸರಿ.

ಧರ್ಮ ಮತ್ತು ಪ್ರೀತಿಯ ನಡುವಿನ ತೊಳಲಾಟದಲ್ಲಿ ಬಳಲುವ ನಾಯಕನ ಕತೆಯಿದು. ಈ ಕಾದಂಬರಿಯನ್ನು ಮೂರ ಭಾಗಗಳಾಗಿ ವಿಂಗಡಿಸಬಹುದು. ಪ್ರಥಮಾರ್ದದಲ್ಲಿ ಭೈರಪ್ಪನವರು ತಮ್ಮದೇ ಜೀವನದ ಕತೆಯನ್ನು ಇಲ್ಲಿ ಹೇಳಿದ್ದಾರೆ. ಸೋಮಾರಿ ತಂದೆ, ಅಕ್ಕ ಅಣ್ಣಂದಿರ ಅಕಾಲಿಕ ಮರಣ, ಮಾವನ ಮನೆಯಲ್ಲಿ ಪಟ್ಟ ಪಾಡು, ಓದಿಗಾಗಿ ಮೈಸೂರಿಗೆ ಸೇರಿದ್ದು ಹೀಗೆ......ತನ್ನ ವಿದ್ಯಾರ್ಥಿ ಜೀವನದಲ್ಲಿ ಶಂಕರ ಎಂಬ ಹಿಂದೂ ಧರ್ಮದ ಕಟ್ಟಾಳು ವಿನ ಪರಿಚಯವಾಗುತ್ತದೆ. ಸನಾತನವಾದ ಹಿಂದೂ ಧರ್ಮದ ಆಳ, ಚಿಂತನೆಗಳು, ಆಚರಣೆಗಳು, ಅದರಲ್ಲಿ ಅಡಗಿರುವ ಭಾವನೆಗಳು , ಮಹಾ ಪುರುಷರುಗಳು ಇತ್ಯಾದಿಗಳನ್ನು ತಿಳಿದು ರೋಮಂಚನಗೊಳ್ಳುತ್ತಾರೆ. ಶಂಕರ ತನ್ನ ಜೀವನವನ್ನು ಹಿಂದೂ ಧರ್ಮದ ಪ್ರಚಾರಕ್ಕಾಗಿ ಮುಡಿಪಾಗಿತ್ತಿರುವುದು, ಅವರ ಮನೆಯವರಿಂದ ಅದಕ್ಕೆ ಸಹಕಾರ ಇದರಿಂದ ಅತ್ಯಂತ ಪ್ರಭಾವಿಯಾಗಿರುತ್ತಾನೆ.
ಒಮ್ಮೆ ಕ್ರೈಸ್ತ ಪಾದ್ರಿ ಒಬ್ಬ ಹಣದ ಆಮಿಷ ಒಡ್ಡಿ ಬಡ ಹಿಂದೂ ಜನಗಳಿಗೆ ಮತಾಂತರ ಗೊಳಿಸಲು ಭಾಷಣ ಮಾಡುತ್ತಿದ್ದಾಗ ಸತ್ಯ ಸಿಡಿದಿದ್ದೆಳುತ್ತಾನೆ. ಹಿಂದೂ ವಿದ್ಯಾರ್ಥಿ ನಿಲಯಗಳಲ್ಲಿ ಹಸುವಿನ ಹಾಲಿನ ಬದಲು ಕ್ರೈಸ್ತರು ನೀಡುತ್ತಿದ್ದ ಡಬ್ಬದ ಹಾಲಿನ ವಿರುದ್ದ ನಿಲ್ಲುತ್ತಾರೆ.
ಹಿಂದೂ ಧರ್ಮದ ಆಚಾರ, ವಿಚಾರ, ಸಂಪ್ರದಾಯ, ಪದ್ಧತಿಗಳು, ಅದರಲ್ಲಿನ ಸತ್ವಗಳು ಹಿಂದೂ ಸ್ಮಾರಕಗಳು, ಇದರ ಉಳಿವೆಗಾಗಿ ತಮ್ಮ ಜೀವನ ಮುಡಿಪು ಎಂದು ಜೀವನ ಸಾಗಿಸುತ್ತ ಇರುತ್ತಾರೆ.

ಈ ನಡುವೆ ಸತ್ಯನಿಗೆ ರಾಚಮ್ಮ ಎಂಬ ಕ್ರೈಸ್ತ ಧರ್ಮದ ಮಹಿಳೆಯ ಪರಿಚಯವಾಗುತ್ತದೆ. ಆಕೆಯ ಸೇವಾ ಭಾವನೆ, ಪ್ರೀತಿ ವಿಶ್ವಾಸಗಳಿಗೆ ಧರ್ಮವನ್ನು ಮೀರಿ ಮಾರು ಹೋಗುತ್ತಾರೆ. ಧರ್ಮದ ದೃಷ್ಟಿಯಿಂದ ಆಕೆ ಇಂದ ದೂರ ಇದ್ದರು... ಸ್ನೇಹಿತನಾಗಿ ಹತ್ತಿರ ಇರಲು ಬಯಸುತ್ತಾರೆ.
ಇದು ದ್ವೀತಿಯಾರ್ದದಲ್ಲಿ ನಡೆಯುವ ಘಟನೆಗಳು. ಈ ನಡುವೆ ಬಡತನದ ಬೇಗೆ, ತಂಗಿಯ ಮಾಡುವೆ ಇತ್ಯಾದಿಗಳ ನಡುವೆ ರಾಚಮ್ಮನಿಂದ ದೂರ ಉಳಿಯುವ ಸಂಧರ್ಬ ಬರುತ್ತದೆ. ತನ್ನ ಆಪ್ತ ಮಿತ್ರನಿಗೆ ತಂಗಿಯನ್ನು ಕೊಟ್ಟು ಮಾಡುವೆ ಮಾಡಿದುದು ಒಂದು ಪ್ರಮುಕವಾದ ಘಟ್ಟ.


ಸತ್ಯ ಕಾಲೇಜು ಮೆಟ್ಟಿಲು ಹತ್ತುತ್ತಾನೆ. ತಾನು ಇಷ್ಟ ಪದದ ಅದ್ಯಪಕರ ಹೆಂಡತಿ 'ರಾಚಮ್ಮ' ಎಂದು ತಿಳಿದು ಆಶ್ಚರ್ಯ ಪಡುತ್ತಾರೆ. ಅದು ಅಲ್ಲದೆ ತಮ್ಮ ಸ್ನೇಹ ಮತ್ತೆ ಮುಂದೆ ವರೆಯುವುದು ಎಂದು ಸಂತೋಷ ಪಡುತ್ತಾರೆ.


ಈ ನಡುವೆ ರಾಚಮ್ಮನ ನಾದಿನಿ ಲಿಲ್ಲಿಯ ಪರಿಚಯವಾಗುತ್ತದೆ. ಈಕೆ ಪಕ್ಕ ಕ್ರೈಸ್ತರ ಹುಡುಗಿ. ಹಣೆಗೆ ಕುಂಕುಮ ಇಡೊಲ್ಲ, ತುಂಡು ಬಟ್ಟೆ, ತುಂಡು ಜಡೆ ಇತ್ಯಾದಿ.... ಹಿಂದೂ ಧರ್ಮದ ಆಚರ ವಿಚಾರಗಳನ್ನ ಗೇಲಿ ಮಾಡುತ್ತಾ ಕಾಲ ಕಳೆಯುತ್ತಿರುತ್ತಾಳೆ. ಹಿಂದೂ ಧರ್ಮದ ಮಹತ್ವವನ್ನು ತಿಳಿಸುವ ಪುಸ್ತಕಗಳ ಬಗ್ಗೆ ಮಾಹಿತಿಯನ್ನು ಸತ್ಯನಿಂದ ಪಡೆಯುತ್ತಾಳೆ. ಸತ್ಯನ ಜೊತೆಗಿನ ಮಾತು ಕತೆ, ಪುಸ್ತಕಗಳು ಅವಳಿಗೆ ಹಿಂದೂ ಧರ್ಮದ ಕಡೆಗೆ ಒಯ್ಯುತ್ತವೆ. ಸತ್ಯ ತಿಳಿದೋ ತಿಳಿಯದೆ ಲಿಲ್ಲಿ ಯನ್ನು ಪ್ರೀತಿಸ ತೊಡಗುತ್ತಾನೆ. ಆಕೆಯ ಸನಿಹ, ಪ್ರೀತಿಯ ಮಾತುಗಳು, ಸೇವಾ ಮಾನೋಭವ ಎಲ್ಲಕ್ಕೂ ಮಾರು ಹೋಗುತ್ತಾನೆ... ಈ ನಿರ್ವಿಕಾರ ಸಂಬಂದದ ನಡುವೆ ಧರ್ಮದ ಆಕಾರ ಬಂದು ನಿಲ್ಲುತ್ತಿರುತ್ತದೆ. ತನ್ನ ಭಾವನೊಡನೆ ತನ್ನ ಮತ್ತು ಲಿಲ್ಲಿಯ ಸಂಭಂದದ ಬಗ್ಗೆ ಚರ್ಚಿಸುತ್ತಾನೆ. ಆದರೆ ಮನೆಯವರಿಂದ ವಿರೋದವೇ ವ್ಯಕ್ತವಾಗುತ್ತದೆ.

ಮನೆಯವರ ವಿರೋದದ ನಡುವೆಯೂ ಲಿಲ್ಲಿಯನ್ನು ಮದುವೆಯಾಗಲು ಬಯಸುತ್ತಾರೆ. ಕ್ರೈಸ್ತರ ಹುಡುಗಿಯ ಮದುವೆಯಾಗಿ ಹಿಂದೂ ಧರ್ಮದ ಸಮಾಜದಲ್ಲಿ ಬದುಕುವುದು ಕಷ್ಟ ಎಂದೆನಿಸುತ್ತದೆ. ಪ್ರೀತಿಯ ಒತ್ತಡಕ್ಕೆ ಮಣಿದು ತಾನೆ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿ ಲಿಲ್ಲಿಯನ್ನು ಮದುವೆಯಾಗುತ್ತಾರೆ. ಇದಕ್ಕೆ ಬಳುವಳಿಯಾಗಿ ಒಂದು ಕ್ರೈಸ್ತ ಶಾಲೆಯಲ್ಲಿ ಪ್ರಿನ್ಸಿಪಾಲ್ ಹುದ್ದೆ ಕೂಡ ಸಿಗುತ್ತದೆ.


ಪ್ರೀತಿಗೆ ಮಣಿದು ಧರ್ಮಕ್ಕೆ ಸೋತು ಜೀವನ ನಡೆಸುವುದು ಕಷ್ಟವಾಗುತ್ತದೆ. ಮನೆಯಲ್ಲಿ ಕ್ರಿಸ್ತನ ಅಂತಿಮ ಕ್ಷಣಗಳ ಚಿತ್ರಗಳು, ಎಲ್ಲೆಲ್ಲು ಶಿಳಬೆಗಳು... ತನ್ನ ಕೊರಳಲ್ಲೊಂದು ಹೀಗೆ.... ಶಾಲೆಯಲ್ಲಿ ಹಿಂದೂ ಧರ್ಮದವರಿಗೆ ಕೆಲಸವಿಲ್ಲ... ಇದ್ದರು ಮರ್ಯಾದೆ ಇಲ್ಲ... ಸತ್ಯನ ಹೆಸರು ಬಳಸಿ ಮತಾಂತರಕ್ಕೆ ಯತ್ನ... ಕ್ರೈಸ್ತರ ಡಬ್ಬದ ಹಾಲು... ಬೈಬಲ್ ಪುಸ್ತಕ ಮಕ್ಕಳ ಮೇಲೆ ಹೇರಿಕೆ...

ಇತ್ತ ಹಿಂದೂ ಸಮಾಜದಲ್ಲೂ ಸತ್ಯನಿಗೆ ಬದುಕಲು ಕಷ್ಟವಾಗುತ್ತದೆ. ಅನೇಕ ಯೋಚನೆ ಗಳು ಮನಸ್ಸಿಗೆ ಬಂದು ಮನಸ್ಸು ಗೋಜಲು ಮಾಯವಾಗುತ್ತದೆ. ಎರಡು ಸನ್ನಿವೇಶಗಳು ಸತ್ಯನನ್ನು ಖಿನ್ನತೆಗೆ ಒಳಪದಿಸುತ್ತವೆ.... ತನ್ನ ತಂದೆಯ ಶ್ರದ್ದ ಮಾಡಲು ತಮ್ಮ ಮನೆಯವರಿಂದಲೇ ಅವಕಾಶ ದೊರಕದಿರುವುದು.. ಹಾಗು ಬೇಲೂರಿಗೆ ಹೋದಾಗ ಮುಂದೆ ನಮ್ಮ ಮಕ್ಕಳು ಇದನ್ನು ನಮ್ಮದು ಎಂದು ಹೇಳಲು ಸಾದ್ಯವಿಲ್ಲ ವಲ್ಲ ಎಂದು ಮರುಗುತ್ತಾರೆ... ಸತ್ಯ ಯಾವ ಕೆಲಸದಲ್ಲೂ ಆಸಕ್ತಿ ವಹಿಸದೆ, ಖಿನ್ನತೆಯಿಂದ ಜೀವನ ಸಾಗಿಸುತ್ತ ಇರುತ್ತಾನೆ. ಲಿಲ್ಲಿಗೆ ಎಲ್ಲವು ಅರಥವಾದರು ಏನು ಮಾಡಲಾಗದೆ ಸತ್ಯನಿಗೆ ಹಿಂದೂ ಧರ್ಮದ ಸಹ ಧರ್ಮಿನಿಯ ರೀತಿ ಜೀವನ ಸಾಗಿಸುತ್ತ ಇರುತ್ತಾಳೆ.
ಒಮ್ಮೆ ಸತ್ಯ ಶಂಕರನನ್ನು ಬೇಟಿ ಮಾಡಿ ತನ್ನ ಮನಸ್ಸಿನ ತೊಳಲಾಟವನ್ನು ಅವನಿಗೆ ತಿಳಿಸುತ್ತಾನೆ. ಶಂಕರ ಸತ್ಯನ ಮನಸಿತಿತಿ ಚೆನ್ನಾಗಿ ಗೊತ್ತಿರುತ್ತದೆ. ಶಂಕರ ಸತ್ಯ ಹಾಗು ಲಿಲ್ಲಿಯನ್ನು ಆರ್ಯ ಸಮಾಜದ ವಿಧಿ ವಿಧಾನಗಳಿಂದ ಹಿಂದೂ ಧರ್ಮಕ್ಕೆ ಸೇರಿಸಿಕೊಲ್ಲುತ್ತಾನೆ.......
ಆಗ ಲಿಲ್ಲಿ ಧರ್ಮರ್ಷಿ ಆಗುತ್ತಲೇ.....
ಭೈರಪ್ಪನವರು ಧರ್ಮ ಮತ್ತು ಪ್ರೀತಿಯ ನಡುವಿನ ತೊಳಲಾಟ... ಮತಾತರದಂತ ಸ್ಮೂಕ್ಷ್ಮ ವಿಚಾರಗಳನ್ನ ಚೆನ್ನಾಗಿ ವಿಮರ್ಶಿಸಿದ್ದಾರೆ..... ಎಲ್ಲರು ಒಮ್ಮ ಓದಲೇ ಬೇಕಾದ ಪುಸ್ತಕ ಇದು...
ಚಿ.ಸ.ನ

ಸಾರ್ಥ ಕ'ಥೆ'ಯ ಭಾವ (ಎಸ್. ಎಲ್. ಭೈರಪ್ಪನವರ ಸಾರ್ಥ ಕಾದಂಬರಿಯ ಒಂದು ಪಕ್ಷಿ ನೋಟ )

ಸಾರ್ಥ ಕ ' ಥೆ ' ಯ ಭಾವ ಸಾರ್ಥ ಎಂಬುದು ವಾಣಿಜ್ಯ ಪದ್ಧತಿ . ಎಂಟನೇ ಶತಮಾನದಲ್ಲಿ ಆನೆ , ಕುದುರೆ , ಹೇಸರಗತ್ತೆ ಹೀಗೆ ನೂರಾರು ಗಾಡಿಗಳ ಮೇಲೆ ...