Sunday, December 7, 2008

ಕಾ- ರೂಪದರ್ಶಿ- ಕ.ವಿ.ಐಯರ್- ಅಂ - ೩/೫

ಬೀಚಿ ಈ ಕಾದಂಬರಿ ಓದಿ ಕಣ್ಣೀರು ಸುರಿಸಿದ್ದರಂತೆ. ಬೀಚಿ ಅವರ "ನನ್ನ ಬಯಾಗ್ರಫಿ" ಓದಿದ ಮೇಲೆ ನನಗೆ ಈ ಪುಸ್ತಕ ಓದಬೇಕೆಂಬ ಹಂಬಲ ಹೆಚ್ಚಾಯಿತು.

ಏಸುವಿನ ಜೀವಿತವನ್ನು ಚಿತ್ರಿಸಲು ಹೊರಟ ಕಲಾವಿದ ಮೈಕಲ್ ಕಂಡದ್ದು ಅರ್ನೆಸ್ಟ್ ಎಂಬ ಅನಾಥ ಬಾಲಕನನ್ನು. ಆತನ ಮುಗ್ದತೆಯನ್ನು ಕಂಡು ಅವನನ್ನು ಏಸುವಿನ ಬಾಲ ದಿನಗಳನ್ನು ಚಿತ್ರಿಸಲು ಅವನನ್ನು ರೂಪದರ್ಶಿಯಾಗಿ ಫ್ಲೋರೆನ್ಸೆ ನಗರಕ್ಕೆ ಕರೆ ತರುತ್ತಾನೆ. ಅರ್ನೆಸ್ಟ್ ನ ಅಜ್ಜಿಗೆ ಸಾಕಷ್ಟು ಹಣ ಕೊಟ್ಟು ಏಸುವಿನ ಬಾಲ್ಯ ಜೀವನದ ಚಿತ್ರಗಳನ್ನು ಬಿಡಿಸುತ್ತಾನೆ.

ಕಡು ಬಡ ಕುಟುಂಬದ ಅರ್ನೆಸ್ಟ್ ಈ ಕೆಲಸದಿಂದ ಸ್ವಲ್ಪ ಹಣ ಗಳಿಸಿ ತನ್ನ ಅಜ್ಜಿಯೊಂದಿಗೆ ಹಿಂದಿರುಗುತ್ತಾನೆ. ಅಲ್ಲಿಂದ ಮುಂದಿನ ಅರ್ನೆಸ್ಟ್ ಜೀವನದ ಹಾಡಿ ಕರಳವಾಗಿರುತದೆ. ಇತ್ತ ಮೈಕಲ್ ಕಾರಣಾಂತರಗಳಿಂದ ಚರ್ಚ್ ನ ಕೆಲಸ ಮದ್ಯದಲ್ಲೇ ನಿಲ್ಲುತ್ತದೆ. ಇದರಲ್ಲೇ ೨೦-೨೫ ವರ್ಷಗಳು ಕಳೆದು ಹೋಗುತ್ತದೆ.
ಎಸುವಿನೊಡನೆ ಸ್ನೇಹಿತನ ರೀತಿ ಇದ್ದು ಏಸುವಿಗೆ ದ್ರೋಹ ಬಗೆಯುವ "ಜುದಾಸನ" ಚಿತ್ರಕ್ಕೆ ಒಬ್ಬ ರೂಪದರ್ಶಿಯನ್ನು ಹುಡುಕುತ್ತ ಮೈಕಲ್ ಒಬ್ಬ ಕುರೂಪಿ, ಕಳ್ಳ ನನ್ನು ಒಪ್ಪಿಸಿ ಕರೆತರುತ್ತಾನೆ... ಈತ ಒಬ್ಬ ಅತ್ಯಂತ ಕುರೂಪಿ ಆಗಿದ್ದು, ಒಂದು ಕಣ್ಣು ಇಲ್ಲದೆ... ಜನರನ್ನು ಲೂಟಿ ಮಾಡಿ ಜೀವನ ಸಾಗಿಸುತ್ತಿರುತ್ತಾನೆ.

ಈತನನ್ನು ಬಲವಂತವಾಗಿ ರೂಪದರ್ಶಿಯ ಕಾರ್ಯಕ್ಕೆ ಕರೆತಂದಾಗ... ಈತನಿಗೆ ತನ್ನ ಹಿಂದಿನದೆಲ್ಲ ನೆನಪಿಗೆ ಬರುತ್ತದೆ... ಆತನೇ ತನ್ನ ಮುದ್ದಿನ ಅರ್ನೆಸ್ಟ್ ಅಂದು ಕೇಳಿ ಮೈಕಲ್ ಮಮ್ಮಲ ಮರುಗುತ್ತಾನೆ... ಅರ್ನೆಸ್ಟ್ ನ ಜೀವನ ಚರಿತ್ರೆಯನ್ನು ಹೃದಯ ವಿದ್ರಾವಕವಾಗಿ ಇಲ್ಲಿ ಚಿತ್ರಿಸಿಲಾಗಿಧೆ..... ಪ್ರೀತಿ, ವಿಶ್ವಾಸ, ಅಂತಃಕರಣ, ಭಾವೊದ್ವೆಗಗಳು ಎಲ್ಲವನ್ನು ಐಯರ್ ರವರು ಅಚ್ಚುಕಟ್ಟಾಗಿ ಸೃಷ್ಟಿಸಿದ್ದಾರೆ.

ಇದೊಂದು ದುಷ್ಟಾಂತದ ಕಥೆ. ಎಷ್ಟೋ ಸಂದರ್ಬ ಕಣ್ತುಂಬಿ ಬರುತ್ತದೆ. ತಾಯಿಯ ಮಮಕಾರ, ತಂಗಿಯ ಅಕ್ಕರೆ, ಪ್ರೆಯಶಿಯ ಪ್ರೀತಿ ಎಲ್ಲವು ಅಚ್ಚುಕಟ್ಟಾಗಿ ಮೂಡಿ ಬಂದಿದೆ...

ಲೆನೋವೋಳ ಸೌಂದರ್ಯವನ್ನು ವರ್ಣಿಸಿರುವ ರೀತಿಯಂತೂ ವರ್ಣಿಸಲಾಗದು......

ಆದರೆ ಈ ಕಥೆಯನ್ನು ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ರೀತಿ ಹೇಳಿರುವುದು ಸ್ವಲ್ಪ ಬೇಸರ ತರುತ್ತದೆ... ಇರೋಪ್ಯ ರಾಷ್ಟ್ರಗಳ ಜನ ಜೀವನ,ಸಂಸ್ಕೃತಿ ಯಾವುದು ಭಾರತೀಯರ ರೀತಿ ಇಲ್ಲ.... ಇಲ್ಲಿ ಬರುವ ಎಲ್ಲ ಪಾತ್ರಗಳು ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತವೆ.

ಈ ಒಂದು ವಿಷಯ ಬಿಟ್ಟರೆ... ಒಂದು ಬಾರಿ ಓದಲೇ ಬೇಕಾದ ಕಾದಂಬರಿ ಇದು...

ಲೆನೋವೋಳ ಸೌಂದರ್ಯವನ್ನು ವರ್ಣಿಸಿರುವ ರೀತಿಯನ್ನು ನೋಡಿದರೆ... ಅವರ "ಶಾಂತಲ" ಕಾದಂಬರಿಯನ್ನು ಓದಲೇ ಬೇಕೆಂದು ಮನಸ್ಸಾಗುತ್ತದೆ...

ಚಿ.ಸ.ನ.

No comments:

ಸಾರ್ಥ ಕ'ಥೆ'ಯ ಭಾವ (ಎಸ್. ಎಲ್. ಭೈರಪ್ಪನವರ ಸಾರ್ಥ ಕಾದಂಬರಿಯ ಒಂದು ಪಕ್ಷಿ ನೋಟ )

ಸಾರ್ಥ ಕ ' ಥೆ ' ಯ ಭಾವ ಸಾರ್ಥ ಎಂಬುದು ವಾಣಿಜ್ಯ ಪದ್ಧತಿ . ಎಂಟನೇ ಶತಮಾನದಲ್ಲಿ ಆನೆ , ಕುದುರೆ , ಹೇಸರಗತ್ತೆ ಹೀಗೆ ನೂರಾರು ಗಾಡಿಗಳ ಮೇಲೆ ...