ಭಾವನೆಗಳ ಸುತ್ತ...
ಭಾವನೆ ಎಂದರೆ ಏನು ಎಂದು ಆ ಪುಟ್ಟ ಹುಡುಗಿ ಕೇಳಿದಾಗ ನನಗೂ ಒಂದು ಕ್ಷಣಕ್ಕೆ ಉತ್ತರಿಸೋದು ಸ್ವಲ್ಪ ಕಷ್ಟದ ಕೆಲಸಾನೇ ಆಗಿತ್ತು. ಉತ್ತರ ಹುಡುಕಲು ಹೊರಟಾಗ ನಾ ಸಿಲುಕಿದ್ದು ಭಾವನೆಗಳ ಸುಳಿಯಲ್ಲಿ.
ಭಾವ ಒಂದು ಮನಸ್ಸಿನ ಸ್ಥಿತಿ. ಅದು ಪ್ರೀತಿ, ನೋವು, ಸಿಟ್ಟು, ಸಂತಸ, ಹುಡುಗಾಟ, ನಿರಾಶೆ, ಅತೃಪ್ತಿ ಯಾವುದಾದರು ಆಗಿರಬಹುದು. ಮನಸ್ಸಿನ ಸ್ಥಿತಿಯನ್ನು ಹೊರಹಾಕಿದ ಸೊಲ್ಲುಗಳೇ ಭಾವ ಗೀತೆಗಳಾದವೇನೋ ... ಸಂಬಂಧಗಳನ್ನು ಬೆಸೆದಿರುವುದು ಈ ಭಾವಗಳೇ ಅಲ್ಲವೇ? ಎಂದೋ ಆಡಿ, ಯಾರನ್ನೋ ಪ್ರೀತಿಸಿ, ನೋವು ನಲಿವಿನಲಿ ಭಾಗಿಯಾಗಿ, ಹುಡುಗಾಟದಿ ಮಿಂಚಿ, ನಿರಾಶೆಯಲಿ ಮಾಸಿ ಕಡೆಗೊಂದು ದಿನ ಈತ ನನ್ನ ಆಪ್ತ ಗೆಳೆಯ, ಆಕೆ ನನ್ನ ಪ್ರೀತಿಯ ಗೆಳತಿ, ಆಪ್ತ ಮಡದಿ, ನಮ್ಮ ಆಪ್ತರು.. ಎಂದೆಲ್ಲ ಹೇಳುವುದಿಲ್ಲವೇ?? ಹಾಗಾದರೆ ಸಂಬಂಧಗಳನ್ನು ಗಟ್ಟಿ ಮಾಡುವುದು ಈ ನಮ್ಮ ಭಾವಗಳೇ...
ಇನ್ನು ಭಾವನೆ? ನಮ್ಮ ಭಾವಗಳಿಂದ ಮೂಡಿದ ಊಹೆ ಅಥವಾ ಅಭಿಪ್ರಾಯವೇ ಭಾವನೆ ಅಲ್ಲವೇ?.
ಹಾಗಾದರೆ ಯಾರು ಈ ಭಾವುಕ ಜೀವಿ? ನಗುವಾಗ ನಕ್ಕು, ಅಳುವಾಗ ಅತ್ತು, ಹುಡುಗಾಟದಿ ಬೆರೆತು, ಭಾವಗಳಿಗೆ ಸ್ಪಂದಿಸುವ ವ್ಯಕ್ತಿಯೇ ಈ ಭಾವುಕ ಜೀವಿಯೇ?? ಆದರೆ ಮನಸ್ಸು ಬುದ್ಧಿಗೆ ನಿಲುಕಿದ್ದು ಭಾವನೆಯೇ? ಮನಸ್ಸು ನಿಲುಕಿದ ಭಾವನೆ ಅರ್ಥ ಕಳೆದು ಕೊಳ್ಳುವುದಿಲ್ಲವೇ?.ಮನಸ್ಸು ಬುದ್ಧಿಗಳನ್ನು ಮೀರಿ ಸ್ವಯಂ ಪ್ರೇರೇಪಿತವಾಗಿ, ಸ್ವಯಂ ಘೋಷಿತವಾಗಿ ಮೂಡುವ ಮನಸ್ಸಿನ ಪ್ರಾಕಾರಗಳೇ ಭಾವನೆಗಳು ಎಂದು ಅರ್ಥೈಸಬಹುದಲ್ಲವೇ? ಆತನೇ ಭಾವುಕ ಜೀವಿ ಅಲ್ಲವೇ?. ಹಾಗಾದರೆ ನಾವು ಭಾವನೆಯನ್ನು ವಿಂಗಡಿಸಿ ಸದ್ಭಾವನೆ ಎನ್ನುವುದು ಸರಿಯೇ? ಅಥವಾ, ಭಾವಗಳನ್ನು ಮಂಡಿಸುವುದು ಮನಸ್ಸು ಬುದ್ಧಿಯ ಕೆಲಸ ಎಂದು ಒಪ್ಪಿಕೊಳ್ಳಬೇಕೇ? ಇದರಿಂದ ಭಾವನೆಗಳಲ್ಲಿ ಭೇಧ ಉಂಟಾಯಿತೇ? ಸಮಯಕ್ಕೆ ಸರಿಯಾಗಿ, ಯಾರಿಗೂ ನೋವುಂಟು ಮಾಡದೆ, ಪರಿಸ್ಥಿತಿಯನ್ನು ಅವಲೋಕಿಸಿ, ಕೆಡಕು ಬಯಸದೆ ವ್ಯಕ್ತ ಪಡಿಸಿದ ಭಾವನೆಯೇ ಸದ್ಭಾವನೆಯಾಗಿರಬೇಕು ಮತ್ತೊಂದು ವಿರುದ್ಧಾರ್ಥವಾಗಿರಬೇಕು. ಹಾಗಾದರೆ ಭಾವುಕ ಜೀವಿಗಳೆಲ್ಲಾ ಸಧ್ಭಾವನೆ ಹೊಂದಿರಬೇಕಿಲ್ಲ ಅಲ್ಲವೇ?
ಒಂದು ಮಗುವಿಗೆ ಸಧ್ಭಾವನೆಯ ಅರ್ಥ ತಿಳಿಸುವುದು ಹೇಗೆ? ಆಗ ಹೇಗೋ ಜಾರಿಕೊಂಡ ನಾನು ಸಿಲುಕಿದ್ದೆ ಭಾವನೆಗಳ ಸುಳಿಯಲ್ಲಿ.
ಚಿ.ಸ.ನ.

No comments:
Post a Comment